×
Ad

2026ರ ಸಾಲಿನ ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನ, ಶಿಫಾರಸು ಸ್ವೀಕಾರ ಆರಂಭ

Update: 2025-04-11 21:01 IST

ಸಾಂದರ್ಭಿಕ ಚಿತ್ರ | PC : PTI

ಹೊಸದಿಲ್ಲಿ: ಮುಂದಿನ ವರ್ಷದ ಗಣರಾಜ್ಯೋತ್ಸ ಮುನ್ನಾ ದಿನ ಘೋಷಣೆಯಾಗುವ ಪದ್ಮ ಪುರಸ್ಕಾರಗಳಿಗೆ ನಾಮನಿರ್ದೇಶನ ಹಾಗೂ ಶಿಫಾರಸುಗಳ ಸ್ವೀಕರಿಸುವ ಪ್ರಕ್ರಿಯೆಯನ್ನು ಕೇಂದ್ರ ಗೃಹ ಸಚಿವಾಲಯವು ಆರಂಭಿಸಿದೆ.

ಮುಂದಿನ ವರ್ಷದ ಪದ್ಮಪುರಸ್ಕಾರಗಳಿ ನಾಮನಿರ್ದೇಶನಗಳನ್ನು ಹಾಗೂ ಶಿಫಾರಸುಗಳನ್ನು ಸಲ್ಲಿಸಲು 2025 ಜುಲೈ 31 ಅಂತಿಮ ದಿನಾಂಕವಾಗಿರುತ್ತದೆ. ಅವುಗಳನ್ನು ರಾಷ್ಟ್ರೀಯ ಪುರಸ್ಕಾರ ವೆಬ್ಸೈಟ್ () ಮೂಲಕ ಸ್ವೀಕರಿಸಲಾಗುವುದೆಂದು ಕೇಂದ್ರ ಗೃಹಸಚಿವಾಲಯ ಶುಕ್ರವಾರ ಅಧಿಕೃತ ಹೇಳಿಕೆಯೊಂದರಲ್ಲಿ ತಿಳಿಸಿದೆ. 2026ರ ಗಣರಾಜ್ಯೋತ್ಸವದ ಮುನ್ನಾ ದಿನ ಪದ್ಮ ಪ್ರಶಸ್ತಿ ಪುರಸ್ಕೃತರ ಹೆಸರುಗಳನ್ನು ಘೋಷಿಸಲಾಗುತ್ತದೆ.

ಪದ್ಮ ವಿಭೂಷಣ, ಪದ್ಮಭೂಷಣ ಹಾಗೂ ಪದ್ಮಶ್ರೀ ಇವು ಪದ್ಮಪ್ರಶಸ್ತಿಗಳಾಗಿದ್ದು , ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರಗಳಲ್ಲೊಂದಾಗಿವೆ.

1954ರಲ್ಲಿ ಆರಂಭಿಸಲಾದ ಪದ್ಮಪ್ರಶಸ್ತಿಗಳನ್ನು ಪ್ರತಿ ವರ್ಷ ಗಣರಾಜ್ಯೋತ್ಸವದ ಮುನ್ನಾ ದಿನ ಘೋಷಿಸಲಾಗುತ್ತದೆ. ಕಲೆ, ಸಾಹಿತ್ಯ, ಶಿಕ್ಷಣ, ಕ್ರೀಡಾ, ವೈದ್ಯಕೀಯ, ಸಮಾಜ ಸೇವೆ, ವಿಜ್ಞಾನ ಹಾಗೂ ಎಂಜಿನಿಯರಿಂಗ್, ಸಾರ್ವಜನಿಕ ವ್ಯವಹಾರ, ನಾಗರಿಕ ಸೇವೆ, ವ್ಯಾಪಾರ ಹಾಗೂ ಕೈಗಾರಿಕೆ ಮತ್ತಿತರ ಕ್ಷೇತ್ರಗಳಲ್ಲಿ ಸಾಧನೆ ಹಾಗೂ ಸೇವೆಗಳನ್ನು ಸಲ್ಲಿಸಿದವರಿಗೆ ಪದ್ಮಪುರಸ್ಕಾರಗಳನ್ನು ನೀಡಲಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News