×
Ad

ಸುರಂಗ ನಿರ್ಮಾಣದಲ್ಲಿ ಭಾಗಿಯಾಗಿಲ್ಲ: ಅದಾನಿ ಸಮೂಹ

Update: 2023-11-27 22:01 IST

Photo: PTI 

ಹೊಸದಿಲ್ಲಿ: ಎರಡು ವಾರಗಳ ಹಿಂದೆ ಕುಸಿತಕ್ಕೊಳಗಾಗಿ 41 ಕಾರ್ಮಿಕರು ಸಿಲುಕಿಕೊಂಡಿರುವ ಉತ್ತರಾಖಂಡದ ನಿರ್ಮಾಣ ಹಂತದಲ್ಲಿರುವ ಸಿಲ್ಕ್ಯಾರ ಸುರಂಗದ ನಿರ್ಮಾಣದಲ್ಲಿ ತಾನು ನೇರವಾಗಿ ಅಥವಾ ಪರೋಕ್ಷವಾಗಿ ಭಾಗಿಯಾಗಿಲ್ಲ ಎಂದು ಉದ್ಯಮಿ ಗೌತಮ್ ಅದಾನಿ ಸಮೂಹ ಸೋಮವಾರ ಹೇಳಿದೆ.

‘‘ಈ ಸುರಂಗ ನಿರ್ಮಾಣದಲ್ಲಿ ಅದಾನಿ ಸಮೂಹ ಅಥವಾ ಅದರ ಯಾವುದೇ ಅಂಗ ಸಂಸ್ಥೆಗಳು ನೇರವಾಗಿ ಅಥವಾ ಪರೋಕ್ಷವಾಗಿ ಯಾವುದೇ ರೀತಿಯಲ್ಲಿ ಭಾಗಿಯಾಗಿಲ್ಲ ಎಂದು ನಾವು ಸ್ಪಷ್ಟಪಡಿಸುತ್ತೇವೆ’’ ಎಂದು ಅದಾನಿ ಸಮೂಹದ ಹೇಳಿಕೆ ತಿಳಿಸಿದೆ.

‘‘ನಾವು ಸುರಂಗ ನಿರ್ಮಾಣದಲ್ಲಿ ತೊಡಗಿಲ್ಲ ಹಾಗೂ ಸುರಂಗ ನಿರ್ಮಾಣದಲ್ಲಿ ಕಂಪೆನಿಯಲ್ಲಿ ಯಾವುದೇ ಶೇರುಗಳನ್ನು ಹೊಂದಿಲ್ಲ ಎಂದು ಕೂಡ ಸ್ಪಷ್ಟಪಡಿಸುತ್ತೇವೆ’’ ಎಂದು ಅದು ಹೇಳಿದೆ.

ಭೂಕುಸಿತದಿಂದ ನಿರ್ಮಾಣ ಹಂತದಲ್ಲಿರುವ ಸಿಲ್ಕ್ಯಾರ-ಬಾರ್ಕೋಟ್ ಸುರಂಗ ನವೆಂಬರ್ 12ರಂದು ಕುಸಿದು 41 ಕಾರ್ಮಿಕರು ಸಿಲುಕಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News