2011ರ ಸೌಮ್ಯ ಅತ್ಯಾಚಾರ ಕೊಲೆ ಪ್ರಕರಣ | ಕಣ್ಣೂರು ಜೈಲಿನಿಂದ ಪರಾರಿಯಾಗಿದ್ದ ಅಪರಾಧಿ ವಿಯ್ಯೂರು ಜೈಲಿಗೆ ಸ್ಥಳಾಂತರ
Update: 2025-07-26 16:51 IST
Govindachamy (Photo: ANI)
ಕೇರಳ: 2011ರ ಸೌಮ್ಯ ಅತ್ಯಾಚಾರ ಕೊಲೆ ಪ್ರಕರಣದ ಅಪರಾಧಿ ಗೋವಿಂದಚಾಮಿಯನ್ನು ಕಣ್ಣೂರು ಜೈಲಿನಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಒಂದು ದಿನದ ನಂತರ ಶನಿವಾರ ಕೇರಳದ ತ್ರಿಶೂರ್ ಜಿಲ್ಲೆಯ ವಿಯ್ಯೂರು ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ.
ಗೋವಿಂದಸ್ವಾಮಿ(41)ಯನ್ನು ವಿಯ್ಯೂರಿಗೆ ಸ್ಥಳಾಂತರಿಸುವ ಆದೇಶ ಶುಕ್ರವಾರ ತಡರಾತ್ರಿ ಬಂದಿತ್ತು. ಆದರೆ, ಬೆಳಿಗ್ಗೆ ಆತನನ್ನು ಭಾರೀ ಭದ್ರತೆಯಲ್ಲಿ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ಬೆಳಿಗ್ಗೆ ಕಣ್ಣೂರು ಕೇಂದ್ರ ಕಾರಾಗೃಹದಿಂದ ಪರಾರಿಯಾಗಿದ್ದ ಗೋವಿಂದಚಾಮಿಯನ್ನು ಕೆಲವೇ ಗಂಟೆಗಳಲ್ಲಿ ಪೊಲೀಸರು ಬಂಧಿಸಿದ್ದರು.
ಜೈಲಿನಿಂದ ಪರಾರಿಯಾಗಿರುವ ಬಗ್ಗೆ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯದ ಮುಂದೆ ಗೋವಿಂದಚಾಮಿಯನ್ನು ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಆತನಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ.