ಏರ್‌ಇಂಡಿಯಾ ದುರಂತ ಸ್ಥಳದಲ್ಲಿ ಎನ್‌ಎಸ್‌ಐ ನಿಯೋಜನೆ
Update: 2025-06-14 21:47 IST
PC : PTI
ಅಹ್ಮದಾಬಾದ್: ಗುಜರಾತ್ ನ ಅಹ್ಮದಾಬಾದ್ ನಲ್ಲಿ 265 ಮಂದಿಯನ್ನು ಬಲಿತೆಗೆದುಕೊಂಡ ಏರ್‌ಇಂಡಿಯಾ ವಿಮಾನದುರಂತದ ಸ್ಥಳದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ಏಜೆನ್ಸಿಗಳಲ್ಲದೆ ರಾಷ್ಟ್ರೀಯ ಭದ್ರತಾ ದಳ (ಎನ್‌ಎಸ್‌ಜಿ)ಯ ತಂಡವನ್ನು ನಿಯೋಜಿಸಲಾಗಿದೆಯೆಂದು ವರದಿಗಳು ತಿಳಿಸಿವೆ.
ಪರಿಹಾರ ಕಾರ್ಯಾಚರಣೆಗಳಲ್ಲಿ ತೊಡಗಿರುವ ಇತರ ಏತರ ಏಜೆನ್ಸಿಗಳಿಗೆ ನೆರವಾಗುವುದಕ್ಕಾಗಿ ಎನ್‌ಎಸ್‌ಜಿ ತಂಡವನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ ಆದರೆ ಯಾವುದೇ ತನಿಖೆ ನಡೆಸುವ ಅಧಿಕಾರವನ್ನು ಅದಕ್ಕೆ ನೀಡಲಾಗಿಲ್ಲವೆಂದು ಅಧಿಕೃತ ಮೂಲಗಳು ತಿಳಿಸಿವೆ.
ವೈಮಾನಿ ಅವಘಡ ತನಿಖಾ ಬ್ಯೂರೋ, ನಾಗರಿಕ ವಾಯುಯಾನ ಮಹಾನಿರ್ದೇಶನಾಲಯ (ಡಿಜಿಸಿಎ), ಅಹ್ಮದಾಬಾದ್ ಕ್ರೈಂ ಬ್ರಾಂಚ್ ಹಾಗೂ ಸ್ಥಳೀಯ ಪೊಲೀಸರು, ಏರ್ ಇಂಡಿಯಾ ದುರಂತದ ತನಿಖೆಯಲ್ಲಿ ಪಾಲ್ಗೊಂಡಿದ್ದಾರೆ.