ರಾಜ್ಯಸಭೆಯಲ್ಲೂ ಆನ್‌ಲೈನ್ ಗೇಮಿಂಗ್ ಮಸೂದೆ ಅಂಗೀಕಾರ
Update: 2025-08-21 15:30 IST
Photo credit: ANI
ಹೊಸದಿಲ್ಲಿ: ರಾಜ್ಯಸಭೆಯಲ್ಲಿ ಭಾರಿ ಗದ್ದಲದ ನಡುವೆಯೂ ಆನ್ ಲೈಮ್ ಗೇಮಿಂಗ್ ಮಸೂದೆ ಅಂಗೀಕಾರಗೊಂಡಿದೆ.
ಮಸೂದೆ ಮಂಡಿಸಿ ಮಾತನಾಡಿದ ಸಚಿವ ಅಶ್ವಿನಿ ವೈಷ್ಣವ್, ಸರಕಾರ ಮಧ್ಯಮ ವರ್ಗ ಹಾಗೂ ಯುವಕರ ಹಿತಾಸಕ್ತಿಯನ್ನು ರಕ್ಷಿಸಲು ಬದ್ಧವಾಗಿದೆ ಎಂದು ಘೋಷಿಸಿದರು.
ಆನ್ ಲೈನ್ ಗೇಮಿಂಗ್ ಮಸೂದೆ 2025 ಅಂಗೀಕಾರಗೊಂಡ ನಂತರ, 10 ನಿಮಿಷಗಳ ಕಾಲ ರಾಜ್ಯಸಭೆಯ ಕಲಾಪಗಳನ್ನು ಮುಂದೂಡಲಾಯಿತು.