×
Ad

‘ಇಂಡಿಯಾ’ ಬಣವು ಮುಸ್ಲಿಮರಿಗೆ ಮೀಸಲಾತಿಗಾಗಿ ಸಂವಿಧಾನವನ್ನು ತಿದ್ದುಪಡಿ ಮಾಡಲಿದೆ: ಪ್ರಧಾನಿ ಮೋದಿ

Update: 2024-05-26 16:43 IST

Photo Credit: PTI

ಮಿರ್ಜಾಪುರ (ಉ.ಪ್ರ): ಪ್ರತಿಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ ಕೋಮುವಾದಿ ಮತ್ತು ಜಾತಿವಾದಿಯಾಗಿದೆ ಎಂದು ರವಿವಾರ ಇಲ್ಲಿ ಬಣ್ಣಿಸಿದ ಪ್ರಧಾನಿ ನರೇಂದ್ರ ಮೋದಿಯವರು, ಮುಸ್ಲಿಮರಿಗೆ ಮೀಸಲಾತಿಯನ್ನು ಒದಗಿಸಲು ಸಂವಿಧಾನವನ್ನು ಬದಲಿಸಲು ಅವು ಬಯಸಿವೆ ಎಂದು ಹೇಳಿದರು.

NDA ಅಭ್ಯರ್ಥಿಗಳಾದ ಮಿರ್ಜಾಪುರ ಲೋಕಸಭಾ ಕ್ಷೇತ್ರದ ಅನುಪ್ರಿಯಾ ಪಟೇಲ್ (ಅಪ್ನಾ ದಲ್) ಮತ್ತು ರಾಬರ್ಟ್ ಗಂಜ್ ಕ್ಷೇತ್ರದ ರಿಂಕಿ ಕೋಲ್ ಬೆಂಬಲಾರ್ಥ ಚುನಾವಣಾ ಸಭೆಯಲ್ಲಿ ಮಾತನಾಡಿದ ಮೋದಿ, ಎಸ್ಪಿ-ಕಾಂಗ್ರೆಸ್ ವೋಟ್ ಬ್ಯಾಂಕ್ ಗಾಗಿ ಮೀಸಲಾಗಿದ್ದರೆ ಮೋದಿ ಹಿಂದುಳಿದವರು ಮತ್ತ ಬಡವರ ಹಕ್ಕುಗಳಿಗಾಗಿ ಸಮರ್ಪಿತರಾಗಿದ್ದಾರೆ. ದೇಶದ ಜನರಿಗೆ ಇಂಡಿಯಾ ಮೈತ್ರಿಕೂಟದ ಬಗ್ಗೆ ತಿಳಿದಿದೆ. ಅವು ಕಟ್ಟಾ ಕೋಮುವಾದಿ, ಜಾತಿವಾದಿ ಮತ್ತು ಪರಿವಾರವಾದಿಗಳಾಗಿವೆ. ಅವು ಅಧಿಕಾರದಲ್ಲಿದ್ದಾಗೆಲ್ಲ ಇದೇ ಆಧಾರದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತವೆ ಎಂದು ಹೇಳಿದರು.

ಎಸ್ಪಿ ಯಾದವ ಸಮುದಾಯವನ್ನು ಕಡೆಗಣಿಸಿದೆ ಮತ್ತು ದಿ.ಮುಲಾಯಂ ಸಿಂಗ್ ಯಾದವ್ ಕುಟುಂಬ ಸದಸ್ಯರಿಗೆ ಮಾತ್ರ ಟಿಕೆಟ್ಗಳನ್ನು ನೀಡಿದೆ ಎಂದೂ ಮೋದಿ ಆರೋಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News