×
Ad

ಹರ್ಯಾಣ: ಬಸ್ ಪಲ್ಟಿಯಾಗಿ 40ಕ್ಕೂ ಹೆಚ್ಚು ಮಕ್ಕಳಿಗೆ ಗಾಯ

Update: 2024-07-08 12:44 IST

Screengrab:X/@ANI

ಪಂಚ್‌ಕುಲ: ಹರ್ಯಾಣ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಒಂದು ಮಗುಚಿ ಬಿದ್ದ ಪರಿಣಾಮ, 40ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿರುವ ಘಟನೆ ಸೋಮವಾರ ಬೆಳಗ್ಗೆ ಪಂಚ್‌ಕುಲ್ ಜಿಲ್ಲೆಯ ಪಿಂಜೋರ್‌ನ ನೌಲ್ತಾ ಗ್ರಾಮದ ಬಳಿ ನಡೆದಿದೆ ಎಂದು ವರದಿಯಾಗಿದೆ.

ಗಾಯಗೊಂಡಿರುವ ವಿದ್ಯಾರ್ಥಿಗಳನ್ನು ಪಂಚ್‌ಕುಲ್ ಜಿಲ್ಲೆಯ ಪಿಂಜೋರ್ ಆಸ್ಪತ್ರೆ ಹಾಗೂ ಸೆಕ್ಟರ್ 6 ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ. ಮಹಿಳೆಯೊಬ್ಬರನ್ನು ಪಿಜಿಐ ಚಂಡೀಗಢ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅತಿಯಾದ ವೇಗ, ಕಿಕ್ಕಿರಿದು ತುಂಬಿದ್ದ ಪ್ರಯಾಣಿಕರು ಹಾಗೂ ಹಾಳಾದ ರಸ್ತೆಯ ಕಾರಣಕ್ಕೆ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News