×
Ad

ಸಂಸತ್ ಭದ್ರತಾ ವೈಫಲ್ಯ: ಲಲಿತ್ ಝಾ ಪೋಲಿಸ್ ಕಸ್ಟಡಿ

Update: 2023-12-23 21:17 IST

ಲಲಿತ್ ಝಾ (Photo: NDTV)

ಹೊಸದಿಲ್ಲಿ: ಸಂಸತ್ ಭದ್ರತಾ ಲೋಪದ ರೂವಾರಿ ಲಲಿತ್ ಝಾ ಪೋಲಿಸ್ ಕಸ್ಟಡಿಯನ್ನು ದಿಲ್ಲಿಯ ನ್ಯಾಯಾಲಯವೊಂದು ಜ.5ರವರೆಗೆ ವಿಸ್ತರಿಸಿದೆ.

ಝಾ ಇಡೀ ಘಟನೆಯ ರೂವಾರಿಯಾಗಿದ್ದಾನೆ ಮತ್ತು ಇಡೀ ಒಳಸಂಚನ್ನು ಬಯಲಿಗೆಳೆಯಲು ಆತನ ಇನ್ನಷ್ಟು ವಿಚಾರಣೆ ಅಗತ್ಯವಾಗಿದೆ ಎಂದು ದಿಲ್ಲಿ ಪೋಲಿಸರು ಕಸ್ಟಡಿ ವಿಸ್ತರಣೆ ಕೋರಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ತಿಳಿಸಿದ್ದರು.

ನ್ಯಾಯಾಲಯವು ಗುರುವಾರ ಇತರ ನಾಲ್ವರು ಆರೋಪಿಗಳಾದ ಮನೋರಂಜನ್ ಡಿ.,ಸಾಗರ ಶರ್ಮಾ, ಅಮೋಲ ಧನರಾಜ ಶಿಂದೆ ಮತ್ತು ನೀಲಂ ದೇವಿ ಅವರ ಕಸ್ಟಡಿಯನ್ನು ಜ.5ರವರೆಗೆ ವಿಸ್ತರಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News