Thane | ಸಾಮಾಜಿಕ ಮಾಧ್ಯಮ ಪ್ರಭಾವಿಯ ಹೌಸಿಂಗ್ ಸೊಸೈಟಿ ಮೇಲೆ ಗುಂಡಿನ ದಾಳಿ, ಓರ್ವನ ಬಂಧನ
Photo Credit : freepressjournal.in
ಥಾಣೆ, ಮಾ. 7: ಉದ್ಯಮಿ ಹಾಗೂ ಸಾಮಾಜಿಕ ಮಾಧ್ಯಮ ಪ್ರಭಾವಿಯೊಬ್ಬರ ಹೌಸಿಂಗ್ ಸೊಸೈಟಿ ಮೇಲೆ ಶನಿವಾರ ಮುಂಜಾನೆ ದುಷ್ಕರ್ಮಿಗಳು ಗುಂಡು ಹಾರಿಸಿದ ಘಟನೆ ಮಹಾರಾಷ್ಟ್ರದ ಠಾಣೆ ಜಿಲ್ಲೆಯಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಶಹಬಾದ್ ಅಲಿಯಾಸ್ ಶಂಭು ಮುನ್ನಾ ಶಂಶದ್ ಖುರೇಶಿ (28)ಯನ್ನು ಬಂಧಿಸಿದ್ದಾರೆ. ಪೊಲೀಸರ ತಂಡ ಶಿಲ್ ದಾಯಿಗಡ್ ಬೀದಿಯಲ್ಲಿ ಬೆನ್ನಟ್ಟಿದಾಗ ಆತ ಐದು ಸುತ್ತು ಗುಂಡು ಹಾರಿಸಿದ್ದಾನೆ. ಇದರಿಂದ ಬೀದಿಯಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಖುರೇಶಿ ಹಾಗೂ ಇನ್ನೋರ್ವ ಆರೋಪಿ ಮುಂಬ್ರಾದ ಕೌಸಾ ಪ್ರದೇಶದಲ್ಲಿ ವಾಸಿಸುತ್ತಿರುವ ಉದ್ಯಮಿ ಹಾಗೂ ಸಾಮಾಜಿಕ ಮಾಧ್ಯಮ ಪ್ರಭಾವಿ ನದೀಮ್ ಮೊಯಿನುದ್ದೀನ್ ಖಾನ್ (45) ಅಲಿಯಾಸ್ ಬಾಬಾ ಖಾನ್ ಅವರ ಹೌಸಿಂಗ್ ಸೊಸೈಟಿ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎರಡು ಗುಂಡುಗಳು ಖಾನ್ ಅವರ ಕಾರನ್ನು ಹಾನಿಗೊಳಿಸಿವೆ. ಗಾಳಿಯಲ್ಲಿ ಒಂದು ಗುಂಡು ಹಾರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳ ಪರಿಶೀಲನೆ ನಡೆಸಿದ ಕೂಡಲೇ ತನಿಖಾ ತಂಡ ಕಾರ್ಯಾಚರಣೆ ಆರಂಭಿಸಿತು ಹಾಗೂ ಖುರೇಶಿಯನ್ನು ಬಂಧಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.