×
Ad

ಹತ್ತನೇ ತರಗತಿ ಉತ್ತೀರ್ಣರಾದ ನಿರುದ್ಯೋಗಿಗಳಿಗೆ 1,500 ರೂ. ಭತ್ಯೆ: ಮಮತಾ ಬ್ಯಾನರ್ಜಿ ಘೋಷಣೆ

Update: 2026-03-07 22:25 IST

ಮಮತಾ ಬ್ಯಾನರ್ಜಿ | Photo Credit : PTI 

ಕೋಲ್ಕತಾ, ಮಾ. 7: ಹತ್ತನೇ ತರಗತಿ ಉತ್ತೀರ್ಣರಾದ ನಿರುದ್ಯೋಗಿ ಯುವ ಉದ್ಯೋಗಾಕಾಂಕ್ಷಿಗಳಿಗೆ ಪ್ರತಿ ತಿಂಗಳು 1,500 ರೂ. ಭತ್ಯೆ ನೀಡಲಾಗುವುದು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಮುನ್ನ ಮಮತಾ ಬ್ಯಾನರ್ಜಿ ಈ ಘೋಷಣೆ ಮಾಡಿದ್ದಾರೆ.

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಸಂದರ್ಭ ಚುನಾವಣಾ ಆಯೋಗ ಮತದಾರರ ಹೆಸರನ್ನು ದೊಡ್ಡ ಸಂಖ್ಯೆಯಲ್ಲಿ ಅಳಿಸಿರುವುದನ್ನು ವಿರೋಧಿಸಿ ನಡೆಸಿದ ಧರಣಿಯಲ್ಲಿ ಅವರು ಈ ಘೋಷಣೆ ಮಾಡಿದರು.

ಹತ್ತನೇ ತರಗತಿ ಉತ್ತೀರ್ಣರಾದ 21 ರಿಂದ 40 ವರ್ಷಗಳ ನಡುವಿನ ಯುವಕರು ಹಾಗೂ ಯುವತಿಯರು ಇಂದಿನಿಂದ (ಮಾರ್ಚ್ 7ರಿಂದ) ತಿಂಗಳಿಗೆ 1,500 ರೂ. ಭತ್ಯೆ ಸ್ವೀಕರಿಸಲಿದ್ದಾರೆ ಎಂದು ಅವರು ತಿಳಿಸಿದರು.

ಈ ನೆರವು ಎಪ್ರಿಲ್‌ನಲ್ಲಿ ಆರಂಭಿಸಲು ನಿರ್ಧರಿಸಲಾಗಿತ್ತು. ಆದರೆ ಅದು ಈಗ ತತ್‌ಕ್ಷಣ ಪ್ರಾರಂಭಿಸಲಾಗಿದೆ ಎಂದು ಬ್ಯಾನರ್ಜಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News