×
Ad

ನಾಳೆ(ಆ.29)ಯಿಂದ ಸೆ.2 ರವರೆಗೆ ಪಾಸ್‌ಪೋರ್ಟ್ ಸೇವಾ ಪೋರ್ಟಲ್ ಸ್ಥಗಿತ

Update: 2024-08-28 20:49 IST

   ಸಾಂದರ್ಭಿಕ ಚಿತ್ರ 

ಹೊಸದಿಲ್ಲಿ: ಆ.29ರ ರಾತ್ರಿ ಎಂಟರಿಂದ ಸೆ.2ರ ಬೆಳಿಗ್ಗೆ ಆರು ಗಂಟೆಯವರೆಗೆ ಪಾಸ್‌ಪೋರ್ಟ್ ಸೇವಾ ಪೋರ್ಟಲ್‌ನ ತಾಂತ್ರಿಕ ನಿರ್ವಹಣೆ ನಡೆಯಲಿದ್ದು,ಈ ಅವಧಿಯಲ್ಲಿ ಪೋರ್ಟಲ್ ಸಾರ್ವಜನಿಕರಿಗೆ ಲಭ್ಯವಿರುವುದಿಲ್ಲ.

ಆ.30ರಂದು ನಿಗದಿಯಾಗಿದ್ದ ಎಲ್ಲ ಅಪಾಯಂಟ್‌ಮೆಂಟ್‌ಗಳನ್ನು ರದ್ದುಗೊಳಿಸಲಾಗಿದೆ. ಅಂದು ನಿಗದಿತ ಅಪಾಯಂಟ್‌ಮೆಂಟ್‌ಗಳನ್ನು ಹೊಂದಿದ್ದ ಅರ್ಜಿದಾರರಿಗೆ ಹೊಸ ದಿನಾಂಕಗಳ ಕುರಿತು ಎಸ್‌ಎಂಎಸ್ ಸಂದೇಶಗಳನ್ನು ರವಾನಿಸಲಾಗುವುದು ಎಂದು ಅಧಿಕೃತ ಹೇಳಿಕೆಯು ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News