×
Ad

ಪಾಕ್ ಶೆಲ್ ದಾಳಿ ಸಂತ್ರಸ್ತ ಕುಟುಂಬಗಳಿಗೆ ಪ್ರಧಾನಿ ಪರಿಹಾರ ಘೋಷಣೆ

Update: 2025-06-06 21:01 IST

 ನರೇಂದ್ರ ಮೋದಿ | PC : PTI

ಕತ್ರಾ: ಇತ್ತೀಚೆಗೆ ಗಡಿಯುದ್ದಕ್ಕೂ ಪಾಕಿಸ್ತಾನಿ ಪಡೆಗಳು ನಡೆಸಿದ ಶೆಲ್ ದಾಳಿಯಲ್ಲಿ ಸಂತ್ರಸ್ತವಾದ ಕುಟುಂಬಗಳಿಗೆ ಪ್ರಧಾನಿ ನರೇಂದ್ರ ಮೋದಿ ಆರ್ಥಿಕ ನೆರವನ್ನು ಘೋಷಿಸಿದ್ದಾರೆ.

ಕತ್ರಾದಲ್ಲಿ ಟಯುಎಸ್‌ಬಿಆರ್‌ಎಲ್ ರೈಲು ಮಾರ್ಗದ ಅಂತಿಮ ಹಂತವನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಸಂದರ್ಭ ಅವರು ಈ ಘೋಷಣೆ ಮಾಡಿದ್ದಾರೆ. ಈ ಪರಿಹಾರ ಯೋಜನೆಯಡಿ ಪಾಕ್‌ನ ಶೆಲ್ ದಾಳಿಯಿಂದಾಗಿ ತೀವ್ರವಾಗಿ ಹಾನಿಗೀಡಾದ ಮನೆಗಳಿಗೆ ತಲಾ 2 ಲಕ್ಷ ರೂ. ಹಾಗೂ ಭಾಗಶಃ ಹಾನಿಗೀಡಾದ ಮನೆಗಳಿಗೆ ತಲಾ 1 ಲಕ್ಷ ರೂ. ನೀಡಲಾಗುವುದು ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News