×
Ad

ಲೋಕಸಭಾ ಸ್ಪೀಕರ್ ಆಯ್ಕೆಯ ನಂತರ ಪರಸ್ಪರ ಕೈಕುಲುಕಿದ ಪ್ರಧಾನಿ ಮೋದಿ-ರಾಹುಲ್ ಗಾಂಧಿ

Update: 2024-06-26 16:46 IST

ರಾಹುಲ್ ಗಾಂಧಿ ,  ನರೇಂದ್ರ ಮೋದಿ | PTI 

ಹೊಸದಿಲ್ಲಿ: ಬುಧವಾರ ಲೋಕಸಭಾ ಸ್ಪೀಕರ್ ಆಗಿ ಓಂ ಬಿರ್ಲಾ ಆಯ್ಕೆಗೊಂಡ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಯವರ ಕೈಕುಲುಕಿದ ಅಪರೂಪದ ಘಟನೆ ನಡೆಯಿತು.

ಎನ್‌ಡಿಎ ಅಭ್ಯರ್ಥಿಯಾಗಿದ್ದ ಓಂ ಬಿರ್ಲಾ 18ನೇ ಲೋಕಸಭಾ ಸ್ಪೀಕರ್ ಆಗಿ ಮರು ಆಯ್ಕೆಗೊಂಡರು.

ಓಂ ಬಿರ್ಲಾ ಅವರು ಲೋಕಸಭಾ ಸ್ಪೀಕರ್ ಆಗಿ ಆಯ್ಕೆಗೊಂಡ ನಂತರ, ಪ್ರಧಾನಿ ನರೇಂದ್ರ ಮೋದಿ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇಬ್ಬರೂ ಜೊತೆಗೂಡಿ ಓಂ ಬಿರ್ಲಾರನ್ನು ಲೋಕಸಭಾ ಸ್ಪೀಕರ್ ಆಸನದತ್ತ ಕರೆದು

ಸಾಮಾಜಿಕ ಮಾಧ್ಯಮ ಬಳಕೆದಾರರ ಪ್ರಕಾರ, 2018ರಲ್ಲಿ ಲೋಕಸಭೆಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿಯವರ ಕೈಕುಲುಕಿ, ಅವರನ್ನು ಅಪ್ಪಿಕೊಂಡಿದ್ದರು. ಇದಾದ ನಂತರ, ಇದೇ ಪ್ರಥಮ ಬಾರಿಗೆ ಇಬ್ಬರೂ ಪರಸ್ಪರ ಕೈಕುಲುಕಿದ್ದಾರೆ ಎಂಬುದರತ್ತ ಬೊಟ್ಟು ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News