×
Ad

ಮಹಿಳಾ ಮೀಸಲಾತಿಯ ವಾಸ್ತವಾಂಶದ ಬಗ್ಗೆ 21 ನಗರಗಳಲ್ಲಿ ಪತ್ರಿಕಾಗೋಷ್ಠಿ

Update: 2023-09-25 11:16 IST

ನವದೆಹಲಿ: ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಅನುಮೋದನೆ ಪಡೆದುಕೊಂಡಿರುವ ಮಹಿಳಾ ಮೀಸಲಾತಿ ಮಸೂದೆಯ ನೈಜತೆಯ ಬಗ್ಗೆ ಇಂದು (ಸೋಮವಾರ) ದೇಶದ 21 ನಗರಗಳಲ್ಲಿ ಪಕ್ಷದ ಮಹಿಳಾ ನಾಯಕಿಯರು ಪತ್ರಿಕಾಗೋಷ್ಠಿ ನಡೆಸಲಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.

ಈ ಕುರಿತು x ನಲ್ಲಿ ಮಾಹಿತಿ ನೀಡಿರುವ ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್‌ ಖೇರಾ, ಮಹಿಳಾ ನಾಯಕಿಯರ ಹೆಸರು ಮತ್ತು ಪತ್ರಿಕಾಗೋಷ್ಠಿ ನಡೆಯಲಿರುವ ನಗರಗಳ ಹೆಸರನ್ನು ಪ್ರಕಟಿಸಿದ್ದಾರೆ.

ಸಂಸದೆ ರಜನಿ ಪಾಟೀಲ್‌ ಅವರು ಅಹಮದಾಬಾದ್‌ನಲ್ಲಿ ಹಾಗೂ ಮಹಿಳಾ ಕಾಂಗ್ರೆಸ್‌ ಮುಖ್ಯಸ್ಥೆ ನೆಟ್ಟಾ ಡಿಸೋಜಾ ಅವರು ಹೈದರಾಬಾದ್‌ನಲ್ಲಿ, ಲಾವಣ್ಯ ಬಲ್ಲಾಳ್‌ ಚೆನ್ನೈನಲ್ಲಿ, ಭವ್ಯಾ ನರಸಿಂಹ ಮೂರ್ತಿ ಗೋವಾದಲ್ಲಿ ಮತ್ತು ಅಲ್ಕಾ ಲಾಂಬಾ ಜೈಪುರ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News