×
Ad

ಬಿಹಾರ ವಿಧಾನ ಸಭೆ ಚುನಾವಣೆ | ನ್ಯಾಯಯುತ ಚುನಾವಣೆ ನಡೆದರೆ ಎನ್‌ಡಿಎ ಸರಕಾರ ಪತನ: ಪ್ರಿಯಾಂಕಾ ಗಾಂಧಿ

Update: 2025-11-06 20:45 IST

ಪ್ರಿಯಾಂಕಾ ಗಾಂಧಿ | Photo Credit : PTI

ಪಾಟ್ನಾ, ನ. 6: ಬಿಹಾರದಲ್ಲಿ ಚುನಾವಣೆ ಮುಕ್ತ ಹಾಗೂ ನ್ಯಾಯಯುತವಾಗಿ ನಡೆದರೆ ಜನರು ಎನ್‌ಡಿಎ ಸರಕಾರವನ್ನು ಪತನಗೊಳಿಸಲಿದ್ದಾರೆ ಹಾಗೂ ಬಡವರು, ಮಹಿಳೆಯರು ಹಾಗೂ ಯುವ ಜನರ ಪರ ಕೆಲಸ ಮಾಡುವ ಸರಕಾರವನ್ನು ಅಸ್ತಿತ್ವಕ್ಕೆ ತರಲಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಗುರುವಾರ ಪ್ರತಿಪಾದಿಸಿದ್ದಾರೆ.

ಅವರು ಬಿಹಾರದಲ್ಲಿ ಚುನಾವಣಾ ಸಮಾವೇಶ ಉದ್ದೇಶಿಸಿ ಮಾತನಾಡಿದರು.

ಎನ್‌ಡಿಎಯ ಧರ್ಮಾಧರಿತ ನೀತಿಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬಿಜೆಪಿ ನಾಯಕರು ಅಭಿವೃದ್ಧಿಯ ಹೆಸರಿನ ಬದಲು, ಧರ್ಮದ ಹೆಸರಿನಲ್ಲಿ ಎನ್‌ಡಿಎಗೆ ಮತ ಹಾಕಿ ಎಂದು ಜನರನ್ನು ಆಗ್ರಹಿಸುತ್ತಿದ್ದಾರೆ ಎಂದರು.

ರಾಜ್ಯದ ಕಳಪೆ ಮೂಲಭೂತ ಸೌಕರ್ಯದ ಕುರಿತಂತೆ ಎನ್‌ಡಿಎ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, ಕಳೆದ 3 ವರ್ಷಗಳಲ್ಲಿ ಬಿಹಾರದಲ್ಲಿ 27 ಸೇತುವೆಗಳು ಕುಸಿದಿವೆ. ರಾಷ್ಟ್ರದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ ಬಿಹಾರದ ಜನತೆ ಬಗ್ಗೆ ಎನ್‌ಡಿಎ ಸರಕಾರಕ್ಕೆ ಸ್ಪಲ್ಪವೂ ಗೌರವವಿಲ್ಲ ಎಂದು ಹೇಳಿದರು.   

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News