ಇನ್ನುಮುಂದೆ ಉಯಿಲು ಕಾರ್ಯರೂಪಕ್ಕೆ ತರಲು ಪ್ರೊಬೇಟ್ ಕಡ್ಡಾಯವಲ್ಲ
ಸಾಂದರ್ಭಿಕ ಚಿತ್ರ | Photo Credit : freepik
ದಾಖಲೆ ನೈಜವಾದುದು ಎಂದು ಅಧಿಕೃತವಾಗಿ ದೃಢಪಡಿಸುವ ನ್ಯಾಯಾಲಯದ ಪ್ರಕ್ರಿಯೆಯಾದ ಪ್ರೊಬೇಟ್ ಇನ್ನು ಮುಂದೆ ಉಯಿಲುಗಳಲ್ಲಿ ಅಗತ್ಯವಿರುವುದಿಲ್ಲ. ರದ್ದತಿ ಮತ್ತು ತಿದ್ದುಪಡಿ ಕಾಯ್ದೆ, 2025ಗೆ ಡಿಸೆಂಬರ್ 20ರಂದು ರಾಷ್ಟ್ರಪತಿಯವರ ಒಪ್ಪಿಗೆ ದೊರೆತಿದೆ.
ಭಾರತದ ಯಾವುದೇ ಭಾಗದಲ್ಲಿ ಉಯಿಲುಗಳಲ್ಲಿ ಕಡ್ಡಾಯವಾಗಿರುವ ಪ್ರೊಬೇಟ್ ಅಥವಾ ಪ್ರಮಾಣಿತ ಇಚ್ಛಾ ಪತ್ರ ಇನ್ನು ಮುಂದೆ ಅಗತ್ಯವಿಲ್ಲ. ದಾಖಲೆ ನೈಜವಾದುದು ಎಂದು ಅಧಿಕೃತವಾಗಿ ದೃಢಪಡಿಸುವ ನ್ಯಾಯಾಲಯದ ಪ್ರಕ್ರಿಯೆಯಾದ ಪ್ರೊಬೇಟ್ ಇನ್ನು ಮುಂದೆ ಉಯಿಲುಗಳಲ್ಲಿ ಅಗತ್ಯವಿರುವುದಿಲ್ಲ.
ರದ್ದತಿ ಮತ್ತು ತಿದ್ದುಪಡಿ ಕಾಯ್ದೆ, 2025ಗೆ ಡಿಸೆಂಬರ್ 20ರಂದು ರಾಷ್ಟ್ರಪತಿಯವರ ಒಪ್ಪಿಗೆ ದೊರೆತಿದೆ. ಈ ಕಾಯ್ದೆ ಭಾರತೀಯ ಉತ್ತರಾಧಿಕಾರ ಕಾಯ್ದೆ, 1925ರಲ್ಲಿರುವ ಒಂದು ಸೆಕ್ಷನ್ ಅನ್ನು ರದ್ದುಗೊಳಿಸಿದೆ. ಈ ಸೆಕ್ಷನ್ ನಿಂದಾಗಿ ಕುಟುಂಬಗಳು ಯಾವುದೇ ಒಂದು ಉಯಿಲನ್ನು ಕಾರ್ಯರೂಪಕ್ಕೆ ತರಬೇಕೆಂದರೆ ನ್ಯಾಯಾಲಯದ ಸಮ್ಮುಖ ಇಡಬೇಕಾಗಿತ್ತು.
ದಶಕಗಳಿಂದ ಪ್ರೊಬೇಟ್ ಅಗತ್ಯವಿದ್ದ ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಾಗಳಲ್ಲೂ ಹೊಸ ಕಾಯ್ದೆ ಜಾರಿಗೆ ಬರಲಿದೆ.
ಈ ಕಾನೂನು ತಿದ್ದುಪಡಿ ಭಾರತೀಯ ಉತ್ತರಾಧಿಕಾರ ಚೌಕಟ್ಟಿನಲ್ಲಿ ಮಹತ್ವದ ಬದಲಾವಣೆಯನ್ನು ತರುತ್ತಿದೆ. ಅದು ಉಯಿಲನ್ನು ಜಾರಿಗೊಳಿಸಲು ಅದನ್ನು ಎಲ್ಲಿ ಕಾರ್ಯಗತಗೊಳಿಸಲಾಗಿದೆ ಮತ್ತು ಅವುಗಳನ್ನು ಬರೆದ ವ್ಯಕ್ತಿಯ ಸಮುದಾಯವನ್ನು ಅವಲಂಬಿಸಿದೆ ಎನ್ನುವ ನಿಯಮವನ್ನು ತೊಡೆದು ಹಾಕಿದೆ.
ಉತ್ತರಾಧಿಕಾರ ಕಾಯ್ದೆಗಳಲ್ಲಿ ನ್ಯಾಯಾಲಯ ಹೇಗೆ ಮತ್ತು ಯಾವಾಗ ಮಧ್ಯಪ್ರವೇಶ ಮಾಡಬಹುದು ಎನ್ನುವುದನ್ನು ಬದಲಿಸಿದೆ. ಲೋಕಸಭೆಯಲ್ಲಿ ಮಸೂದೆಯನ್ನು ಮುಂದಿಟ್ಟ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಅರ್ಜುನ್ ರಾಮ್ ಮೇಘವಾಲ್, “ಸಮಕಾಲೀನ ಉತ್ತರಾಧಿಕಾರದೊಂದಿಗೆ ಹೊಂದಿಕೆಯಾಗದ ನಿಬಂಧನೆಯಾದ 1925ರ ಕಾನೂನಿನ ಸೆಕ್ಷನ್ 213ರನ್ನು ತೆಗೆದು ಹಾಕಿರುವುದರಿಂದ ಭೌಗೋಳಿಕವಾಗಿ ಸೀಮಿತವಾಗಿದ್ದ ಮತ್ತು ಸಮುದಾಯ-ನಿರ್ದಿಷ್ಟವಾಗಿದ್ದ ಲೋಪವನ್ನು ಸರಿಪಡಿಸಲಾಗಿದೆ” ಎಂದು ಹೇಳಿದ್ದಾರೆ.
ಉಯಿಲಿನ ಪ್ರೊಬೇಟ್ ಎಂದರೇನು?
ಭಾರತೀಯ ಉತ್ತರಾಧಿಕಾರ ಕಾಯ್ದೆಯ ಸೆಕ್ಷನ್ 2(ಎಫ್) ಅಡಿಯಲ್ಲಿ ವ್ಯಾಖ್ಯಾನಿಸಲಾದ ಪ್ರೊಬೇಟ್ ಎಂದರೆ ಒಬ್ಬ ವ್ಯಕ್ತಿ ಮೃತಪಟ್ಟಾಗ, ನಿರ್ದಿಷ್ಟವಾಗಿ ಅವರು ಮಾನ್ಯವಾದ ಉಯಿಲು ಮಾಡಿದಾಗ ಹೊಂದಿರುವ ಎಲ್ಲಾ ಆಸ್ತಿಗಳಿಗೆ ಆಡಳಿತದ ಮಂಜೂರಾತಿಯೊಂದಿಗೆ ಸಮರ್ಥ ನ್ಯಾಯ ವ್ಯಾಪ್ತಿಯ ನ್ಯಾಯಾಲಯದ ಮುದ್ರೆಯಡಿಯಲ್ಲಿ ಪ್ರಮಾಣೀಕರಿಸಲಾದ ಉಯಿಲಿನ ಪ್ರತಿ.
ಉಯಿಲನ್ನು ಪ್ರೊಬೇಟ್ ಗೆ ಕಳುಹಿಸಿದಾಗ ಅದನ್ನು ಸರಿಯಾಗಿ ಸಹಿಹಾಕಲಾಗಿದೆ ಮತ್ತು ಸಾಕ್ಷಿಗಳು ಸರಿಯಾಗಿವೆಯೆ, ಆ ಉಯಿಲನ್ನು ಮಾಡುವಾಗ ವ್ಯಕ್ತಿಯ ಮನೋಸ್ಥಿತಿ ಸಮರ್ಪಕವಾಗಿತ್ತೆ ಮತ್ತು ದಾಖಲೆ ಅಧಿಕೃತವೆ ಎಂದು ನ್ಯಾಯಾಲಯ ಪರಿಶೀಲಿಸುತ್ತದೆ. ಎಲ್ಲವೂ ಸರಿಯಿದೆ ಎಂದು ಅನಿಸಿದಾಗ ನ್ಯಾಯಾಲಯ ಪ್ರೊಬೇಟ್ ಆದೇಶವನ್ನು ನಿಡುತ್ತದೆ. ಅದರಿಂದ ಮರಣ ಹೊಂದಿದ ವ್ಯಕ್ತಿಯ ಇಚ್ಛೆಯ ಪ್ರಕಾರ ಆಸ್ತಿಯನ್ನು ನಿರ್ವಹಿಸಲು ಕಾರ್ಯನಿರ್ವಾಹಕರಿಗೆ ಕಾನೂನುಬದ್ಧ ಅಧಿಕಾರವನ್ನು ಸಿಗುತ್ತದೆ.
ವ್ಯಕ್ತಿಯು ಉಯಿಲುರಹಿತವಾಗಿ ಮೃತಪಟ್ಟಾಗ ಈ ಅಗತ್ಯಕ್ಕೆ ವಿರುದ್ಧವಾದ ಉತ್ತರಾಧಿಕಾರ ಚಾಲ್ತಿಯಲ್ಲಿರುತ್ತದೆ. ಹಿಂದೂ ಉತ್ತರಾಧಿಕಾರ ಕಾಯ್ದೆ, 1956ರ ಅಡಿಯಲ್ಲಿ ಯಾವುದೇ ಪ್ರೊಬೇಟ್ ಅಥವಾ ನ್ಯಾಯಾಲಯದ ಮಾನ್ಯತೆಯ ಅಗತ್ಯವಿಲ್ಲದೆ ಆಸ್ತಿಗೆ ಕಾನೂನಾತ್ಮಕ ವಾರಸುದಾರರಿಗೆ ಹಸ್ತಾಂತರವಾಗುತ್ತದೆ. ಹೀಗಾಗಿ ಉಯಿಲು ಬರೆಯದ ವ್ಯಕ್ತಿಯು ಉಯಿಲು ಬರೆದ ವ್ಯಕ್ತಿಗಿಂತ ಸುಲಭವಾಗಿ ಆಸ್ತಿಯ ಅಧಿಕಾರವನ್ನು ತಮ್ಮ ವಾರಸುದಾರರಿಗೆ ಹಸ್ತಾಂತರಿಸುತ್ತಾರೆ.
ಮುಖ್ಯವಾಗಿ ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಾಗಳಲ್ಲಿ ವಸಾಹತುಶಾಹಿ ಕಾನೂನಿನಡಿ ಆಸ್ತಿಯ ಹಕ್ಕು ಪಡೆಯುವುದು ಸಂಕೀರ್ಣವಾಗಿತ್ತು. ಸೆಕ್ಷನ್ 213 ಅಡಿಯಲ್ಲಿ ಕೆಲವು ಪ್ರಕರಣಗಳಲ್ಲಿ ಈ ನ್ಯಾಯಾಂಗದ ಮಾನ್ಯತೆ ಅತ್ಯಗತ್ಯವಾಗಿತ್ತು. “ನ್ಯಾಯಾಲಯವು ಪ್ರೊಬೇಟ್ ನೀಡದೆ ಹೋದರೆ ಕಾನೂನಿನಡಿ ಆಸ್ತಿಯ ಮೇಲೆ ಹಕ್ಕು ಸಾಧಿಸಲು ಕಾರ್ಯನಿರ್ವಾಹಕರಿಗೆ ಅನುಮತಿ ಇಲ್ಲ” ಎಂದು ಸೆಕ್ಷನ್ 213ರಲ್ಲಿ ಹೇಳಲಾಗಿತ್ತು.
ಸೆಕ್ಷನ್ 213 ಕೆಲವು ಪ್ರಕರಣಗಳಿಗೆ ಮಾತ್ರ ಏಕೆ ಅನ್ವಯಿಸುತ್ತದೆ?
ಪ್ರೊಬೇಟ್ ಕಡ್ಡಾಯ ಎನ್ನುವುದು ದೇಶದ ಎಲ್ಲಾ ಭಾಗಗಳಿಗೂ ಅನ್ವಯಿಸುವುದಿಲ್ಲ. ಕಾಯ್ದೆಯ ಸೆಕ್ಷನ್ 57 ಮತ್ತು 213ರಡಿ ಸಂಯೋಜಿತವಾಗಿ ಓದಬೇಕಾಗುತ್ತದೆ.
ಸೆಕ್ಷನ್ 57ರಡಿ ಕಾಯ್ದೆಯ ನಿರ್ದಿಷ್ಟ ಸೌಲಭ್ಯಗಳು ಹಿಂದೂಗಳು, ಬೌದ್ಧಮತೀಯರು, ಸಿಖ್ಖರು ಮತ್ತು ಜೈನರಿಗೆ ಅನ್ವಯಿಸುತ್ತದೆ. ಬಂಗಾಳದ ಲೆಫ್ಟಿನೆಂಟ್ ಗವರ್ನರ್‌ಗಳ ಆಡಳಿತದಲ್ಲಿರುವ ಪ್ರದೇಶಗಳಿಗೆ ಮುಖ್ಯವಾಗಿ ಅನ್ವಯಿಸುತ್ತದೆ. ಅಥವಾ ಮದ್ರಾಸ್ ಮತ್ತು ಬಾಂಬೆಯ ಸಿವಿಲ್ ವ್ಯಾಪ್ತಿಗೆ ಅನ್ವಯಿಸುತ್ತದೆ. ಉಯಿಲಿನ ಈ ವ್ಯಾಖ್ಯಾನಿತ ವರ್ಗಕ್ಕೆ ಸೆಕ್ಷನ್ 213 ಅಡಿಯಲ್ಲಿ ಪ್ರೊಬೇಟ್ ಕಡ್ಡಾಯಗೊಳಿಸಲಾಗಿತ್ತು. ಮುಸ್ಲಿಂ ಮತ್ತು ಕ್ರಿಶ್ಚಿಯನ್ನರನ್ನು ಹೊರಗಿಡಲಾಗಿತ್ತು. ಪಾರ್ಸಿಗಳನ್ನು ನಂತರ ಇದರ ಅಡಿಗೆ ತರಲಾಯಿತು. ಹಾಗೂ ಅದೇ ಪ್ರದೇಶದ ವ್ಯಾಪ್ತಿಗೆ ಮಾತ್ರ ಅನ್ವಯಿಸುತ್ತಿತ್ತು.
ಮುಖ್ಯವಾಗಿ ಕಾನೂನಿನ ಚೌಕಟ್ಟು ಎಲ್ಲಿ ಉಯಿಲು ಮಾಡಲಾಗಿದೆ ಮತ್ತು ಯಾರು ಮಾಡಿದ್ದಾರೆ ಎನ್ನುವುದನ್ನು ಅನುಸರಿಸಿತ್ತು. ಇದರಿಂದಾಗಿ ಅಸಹಜವಾದ ಉತ್ತರಾಧಿಕಾರದ ಚೌಕಟ್ಟು ಇತ್ತು. ಒಂದೇ ರೀತಿಯ ಆಸ್ತಿ ಮತ್ತು ವ್ಯಾಜ್ಯ ಹೊಂದಿರುವ ದೇಶದ ಎರಡು ಕುಟುಂಬಗಳು ಎಲ್ಲಿವೆ ಎನ್ನುವುದನ್ನು ಅನುಸರಿಸಿ ವಿಭಿನ್ನ ನ್ಯಾಯ ಪಡೆಯುತ್ತಿದ್ದರು. ನ್ಯಾಯಾಲಯ ಈ ಸಮಸ್ಯೆಯನ್ನು ಒಪ್ಪಿಕೊಳ್ಳುತ್ತಾ ಸೆಕ್ಷನ್ ಅನ್ವಯಿಸುತ್ತಾ ಬಂದಿವೆ. ಇದೀಗ ಸೆಕ್ಷನ್ 213 ತೊಡೆದು ಹಾಕಿದರೆ ಉತ್ತರಾಧಿಕಾರದ ಕಾನೂನಿನಲ್ಲಿ ಏಕರೂಪತೆ ಬಂದಿದೆ.
ಈಗ ಏನು ಬದಲಾವಣೆ ಬಂದಿದೆ?
ಪರಿಣಾಮಗಳು ನೇರವಾಗಿ ಕಂಡುಬರಲಿವೆ. ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಾಗಳಲ್ಲೂ ಉಯಿಲು ಕಾರ್ಯರೂಪಕ್ಕೆ ಬರಲು ಪ್ರೊಬೇಟ್ ಅಗತ್ಯ ಇರುವುದಿಲ್ಲ. ನ್ಯಾಯಾಲಯಗಳು ಉಯಿಲನ್ನು ಜಾರಿಗೊಳಿಸಲು ಅದನ್ನು ಎಲ್ಲಿ ಕಾರ್ಯಗತಗೊಳಿಸಲಾಗಿದೆ ಮತ್ತು ಅವುಗಳನ್ನು ಬರೆದ ವ್ಯಕ್ತಿಯ ಸಮುದಾಯವನ್ನು ಅವಲಂಬಿಸಿದೆ ಎನ್ನುವ ನಿಯಮವನ್ನು ನೋಡುವ ಅಗತ್ಯವಿರುವುದಿಲ್ಲ. ಉಯಿಲಿಗೆ ವಿರೋಧವಿಲ್ಲದ ಸಂದರ್ಭದಲ್ಲಿ ಇದರಿಂದಾಗಿ ಸಮಯ, ವೆಚ್ಚ ಮತ್ತು ವ್ಯಾಜ್ಯದ ಸಮಯ ಉಳಿತಾಯವಾಗಿದೆ.
ಹಾಗೆಂದು ಪ್ರೊಬೇಟ್ ಅಪ್ರಸ್ತುತವೇನೂ ಆಗಿಲ್ಲ. ಇದು ಪ್ರೊಬೇಟ್ ಅನ್ನು ಕಡ್ಡಾಯದಿಂದ ಆಯ್ಕೆಯಾಗಿ ಪರಿವರ್ತಿಸಿದೆ. ನ್ಯಾಯಾಲಯಗಳು ಇನ್ನೂ ಅಗತ್ಯವಿದ್ದರೆ ಪ್ರೊಬೇಟ್ ಅನ್ನು ಅನುಸರಿಸಬಹುದಾಗಿದೆ. ಬ್ಯಾಂಕ್‌ಗಳು, ವಸತಿ ಸಮಾಜಗಳು ಮತ್ತು ರಿಜಿಸ್ಟ್ರಾರ್‌ಗಳು ನ್ಯಾಯಾಲಯಗಳಲ್ಲ. ಪ್ರೊಬೇಟ್ ಇರುವ ಉಯಿಲು ಭವಿಷ್ಯದ ನ್ಯಾಯಾಲಯದ ಹಕ್ಕಿಗೆ ನೆರವಾಗಲಿದೆ. ಅದಿಲ್ಲದೆ ಇದ್ದರೆ ವ್ಯಾಜ್ಯವಾಗುವ ಸಂಭವ ಬರಬಹುದು. ಹೀಗಾಗಿ, ಶಾಸನಬದ್ಧ ಆದೇಶದ ಅನುಪಸ್ಥಿತಿಯಲ್ಲಿ ಘರ್ಷಣೆಯಿಲ್ಲದೆ ಉಯಿಲು ಕಾರ್ಯರೂಪಕ್ಕೆ ಬರದೆ ಇರಬಹುದು.