×
Ad

ಪುಣೆ |ಮಹಿಳೆಯ ಮೇಲೆ ಮೂವರಿಂದ ಅತ್ಯಾಚಾರ, ಆಕೆಯ ಸ್ನೇಹಿತನಿಗೆ ಹಲ್ಲೆ

Update: 2024-10-04 21:20 IST

ಸಾಂದರ್ಭಿಕ ಚಿತ್ರ

ಪುಣೆ : ಪುಣೆ ನಗರದ ಹೊರವಲಯದಲ್ಲಿ 21ರ ಹರೆಯದ ಮಹಿಳೆಯ ಮೇಲೆ ಮೂವರು ವ್ಯಕ್ತಿಗಳು ಅತ್ಯಾಚಾರವೆಸಗಿ, ಆಕೆಯ ಸ್ನೇಹಿತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೋಲಿಸರು ಶುಕ್ರವಾರ ತಿಳಿಸಿದರು.

ಗುರುವಾರ ರಾತ್ರಿ 11 ಗಂಟೆಯ ಸುಮಾರಿಗೆ ಬೋಪದೇವ ಘಾಟ್ ಪ್ರದೇಶದಲ್ಲಿ ಈ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದರು.

ಪ್ರಾಥಮಿಕ ಮಾಹಿತಿಯಂತೆ ಮಹಿಳೆ ತಡರಾತ್ರಿ ತನ್ನ ಸ್ನೇಹಿತನೊಂದಿಗೆ ಬೋಪದೇವ ಘಾಟ್ ಪ್ರದೇಶಕ್ಕೆ ತೆರಳಿದ್ದಳು. ಅಲ್ಲಿಯ ನಿರ್ಜನ ಸ್ಥಳದಲ್ಲಿ ಮೂವರು ವ್ಯಕ್ತಿಗಳು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ ಮತ್ತು ಸ್ನೇಹಿತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಕೊಂಢವಾ ಪೋಲಿಸ್ ಠಾಣೆಯ ಅಧಿಕಾರಿಯೋರ್ವರು ತಿಳಿಸಿದರು.

ಆರೋಪಿಗಳ ಪತ್ತೆಗಾಗಿ 10 ಪೋಲಿಸ್ ತಂಡಗಳನ್ನು ರಚಿಸಲಾಗಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News