×
Ad

ಪುಣೆ ಕಾರು ಅಪಘಾತ ಪ್ರಕರಣ: ಚಾಲಕನನ್ನು ಅಕ್ರಮವಾಗಿ ಕೂಡಿಟ್ಟುಕೊಂಡಿದ್ದ ಬಾಲಕನ ಅಜ್ಜನ ಬಂಧನ

Update: 2024-05-25 14:41 IST

PC : NDTV

ಪುಣೆ: ಪುಣೆ ನಗರದಲ್ಲಿ ತನ್ನ ಪೋರ್ಶೆ ಕಾರಿನಲ್ಲಿ ಅಪಘಾತವೆಸಗಿ, ಇಬ್ಬರ ಸಾವಿಗೆ ಕಾರಣವಾಗಿದ್ದ 17 ವರ್ಷದ ಅಪ್ರಾಪ್ತ ಬಾಲಕನ ತಾತನನ್ನು ಕುಟುಂಬದ ಚಾಲಕನನ್ನು ಅಕ್ರಮವಾಗಿ ಕೂಡಿಟ್ಟಿದ್ದ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ಶನಿವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಅಪಘಾತ ಪ್ರಕರಣದಲ್ಲಿ ಅಪ್ರಾಪ್ತ ಬಾಲಕನ ತಂದೆ ವಿಶಾಲ್ ಅಗರ್ವಾಲ್ ಅವರನ್ನೂ ಹೆಸರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಅಪ್ರಾಪ್ತ ಬಾಲಕನ ಚಾಲಕನ ಕುಟುಂಬದ ಸದಸ್ಯರು ನೀಡಿದ ದೂರನ್ನು ಆಧರಿಸಿ ಯೆರವಾಡ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 365 (ಗೋಪ್ಯ ಉದ್ದೇಶದೊಂದಿಗೆ ಅಪಹರಣ ಹಾಗೂ ವ್ಯಕ್ತಿಯೊಬ್ಬನ ಅಕ್ರಮ ಬಂಧನ) ಹಾಗೂ ಸೆಕ್ಷನ್ 368 (ಅಕ್ರಮವಾಗಿ ಕೂಡಿಡುವುದು ಅಥವಾ ಬಂಧನದಲ್ಲಿಡುವುದು) ಅಡಿ ಅಪ್ರಾಪ್ತ ಬಾಲಕನ ತಾತನ ವಿರುದ್ಧ ಪ್ರತ್ಯೇಕ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಪುಣೆ ನಗರದಲ್ಲಿ ಅಪ್ರಾಪ್ತ ಬಾಲಕನು ಪಾನಮತ್ತನಾಗಿ ಕಾರು ಚಲಾಯಿಸಿ, ಬೈಕ್ ಸವಾರರಿಗೆ ಢಿಕ್ಕಿ ಹೊಡೆದಿದ್ದರಿಂದ, ಇಬ್ಬರು ಸವಾರರೂ ಮೃತಪಟ್ಟಿದ್ದರು. ಈ ಸಂಬಂಧ ಅಪ್ತಾಪ್ತ ಬಾಲಕನನ್ನು ಬಾಲಾಪರಾಧ ಕಾರಾಗೃಹಕ್ಕೆ ಕಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News