×
Ad

Pune | ಸಹಪಾಠಿಯಿಂದ ವಿದ್ಯಾರ್ಥಿಯ ಹತ್ಯೆ

Update: 2025-12-15 21:28 IST

credit : PTI

ಪುಣೆ,ಡಿ.15: ಖಾಸಗಿ ಕೋಚಿಂಗ್ ಸೆಂಟರ್‌ ನ ತರಗತಿ ಕೋಣೆಯಲ್ಲಿ 16ರ ಹರೆಯದ ಬಾಲಕನನ್ನು ಆತನ ಸಹಪಾಠಿಯೇ ಚೂರಿಯಿಂದ ಇರಿದು ಹತ್ಯೆಗೈದಿರುವ ಘಟನೆ ಸೋಮವಾರ ಬೆಳಿಗ್ಗೆ ಪುಣೆ ಜಿಲ್ಲೆಯ ರಾಜಗುರುನಗರದಲ್ಲಿ ನಡೆದಿದೆ.

ಇಬ್ಬರೂ 10ನೇ ತರಗತಿಯಲ್ಲಿ ಓದುತ್ತಿದ್ದು ಅವರ ನಡುವಿನ ಹಿಂದಿನ ವಿವಾದ ಕೊಲೆಗೆ ಕಾರಣವಾಗಿದೆ ಎಂದು ಪೋಲಿಸರು ತಿಳಿಸಿದರು.

ಚೂರಿ ಇರಿತದಿಂದ ತೀವ್ರವಾಗಿ ಗಾಯಗೊಂಡಿದ್ದ ಬಾಲಕನನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿತ್ತು,ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತ ಕೊನೆಯುಸಿರೆಳೆದಿದ್ದಾನೆ. ಆರೋಪಿ ಬಾಲಕನನ್ನು ಬಂಧಿಸಲಾಗಿದೆ ಎಂದು ಪೋಲಿಸರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News