×
Ad

ಹರ್ಯಾಣದಲ್ಲಿ ಮತಗಳ್ಳತನದ ರಾಹುಲ್ ಗಾಂಧಿ ಆರೋಪ ಆಧಾರರಹಿತ: ಚುನಾವಣಾ ಆಯೋಗದ ಮೂಲಗಳು

Update: 2025-11-05 15:11 IST

ರಾಹುಲ್‌ ಗಾಂಧಿ (Photo: PTI)

ಹೊಸದಿಲ್ಲಿ: ಹರ್ಯಾಣದಲ್ಲಿ ಮತಗಳ್ಳತನ ನಡೆದಿತ್ತು ಎಂಬ ರಾಹುಲ್ ಗಾಂಧಿಯವರ ಆರೋಪ ಆಧಾರರಹಿತವಾಗಿದೆ ಮತ್ತು ಮತದಾರರ ಪಟ್ಟಿಗಳ ವಿರುದ್ಧ ಯಾವುದೇ ಮೇಲ್ಮನವಿಯನ್ನು ಸಲ್ಲಿಸಲಾಗಿರಲಿಲ್ಲ ಎಂದು ಚುನಾವಣಾ ಆಯೋಗದ ಮೂಲಗಳು ಬುಧವಾರ ತಿಳಿಸಿವೆ.

ಕಾಂಗ್ರೆಸ್‌ನ ಬೂತ್ ಮಟ್ಟದ ಏಜೆಂಟ್‌ಗಳು ಮತದಾರರ ಹೆಸರುಗಳ ಬಹು ನಮೂದುಗಳನ್ನು ತಪ್ಪಿಸಲು ಪರಿಷ್ಕರಣೆ ಸಮಯದಲ್ಲಿ ಏಕೆ ಹಕ್ಕುಕೋರಿಕೆಗಳು ಮತ್ತು ಆಕ್ಷೇಪಣೆಗಳನ್ನು ಎತ್ತಿರಲಿಲ್ಲ ಎಂದು ಅವು ಪ್ರಶ್ನಿಸಿವೆ.

ಮತದಾನದ ಮೇಲೆ ನಿಗಾಯಿರಿಸಲು ಮತ್ತು ಅಕ್ರಮಗಳೇನಾದರೂ ನಡೆದರೆ ಗುರುತಿಸಲು ರಾಜಕೀಯ ಪಕ್ಷಗಳು ಬೂತ್ ಮಟ್ಟದ ಏಜೆಂಟ್‌ಗಳನ್ನು ನೇಮಿಸುತ್ತವೆ.

ಹರ್ಯಾಣದಲ್ಲಿ 5.21 ಲಕ್ಷ ನಕಲಿ ಮತದಾರರು,93,174 ಅಸಿಂಧು ಮತಗಳು ಮತ್ತು 19.26 ಲಕ್ಷದಷ್ಟು ಬೃಹತ್ ಸಂಖ್ಯೆಯ ಮತದಾರರ ಮೂಲಕ ಬಿಜೆಪಿಗಾಗಿ 25 ಲಕ್ಷಗಳ ಮತಗಳನ್ನು ಕದಿಯಲಾಗಿತ್ತು ಎಂದು ರಾಹುಲ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ಬಿಜೆಪಿಯೊಂದಿಗೆ ಗುರುತಿಸಿಕೊಂಡಿರುವ ಸಾವಿರಾರು ಜನರು ಹರ್ಯಾಣ ಮತ್ತು ಉತ್ತರ ಪ್ರದೇಶ ಎರಡರಲ್ಲೂ ಮತಗಳನ್ನು ಚಲಾಯಿಸಿದ್ದಾರೆ ಎಂದು ಅವರು ಪ್ರತಿಪಾದಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News