×
Ad

ರಾಜಸ್ಥಾನ | ಸರಕಾರಿ ಶಾಲೆಗಳಲ್ಲಿ 86,000 ಶಿಥಿಲ ತರಗತಿ ಕೋಣೆಗಳ ಬಳಕೆಗೆ ಹೈಕೋರ್ಟ್ ನಿಷೇಧ

Update: 2025-08-23 21:21 IST

ಜೈಪುರ,ಆ.23: ಮಹತ್ವದ ಆದೇಶವೊಂದರಲ್ಲಿ ರಾಜ್ಯಾದ್ಯಂತ ಸರಕಾರಿ ಶಾಲೆಗಳಲ್ಲಿಯ 86,000ಕ್ಕೂ ಅಧಿಕ ಶಿಥಿಲ ತರಗತಿ ಕೋಣೆಗಳ ಬಳಕೆಯನ್ನು ನಿಷೇಧಿಸಿರುವ ರಾಜಸ್ಥಾನ ಉಚ್ಚ ನ್ಯಾಯಾಲಯವು, ಆ ಕೋಣೆಗಳಿಗೆ ಬೀಗ ಹಾಕುವಂತೆ ಮತ್ತು ಅವುಗಳನ್ನು ಪ್ರವೇಶಿಸಲು ಮಕ್ಕಳಿಗೆ ಅವಕಾಶ ನೀಡದಂತೆ ನಿರ್ದೇಶಿಸಿದೆ.

ಜುಲೈನಲ್ಲಿ ಝಲಾವರ್‌ ನಲ್ಲಿ ಶಾಲೆಯೊಂದರ ಛಾವಣಿ ಕುಸಿದು ಏಳು ವಿದ್ಯಾರ್ಥಿಗಳು ಮೃತಪಟ್ಟ ಮತ್ತು ಎಂಟು ವಿದ್ಯಾರ್ಥಿಗಳು ಗಾಯಗೊಂಡ ಘಟನೆಯ ಬಳಿಕ ಸರಕಾರವು ನಡೆಸಿದ ಸಮೀಕ್ಷೆಯ ಹಿನ್ನೆಲೆಯಲ್ಲಿ ಉಚ್ಚ ನ್ಯಾಯಾಲಯವು ಶುಕ್ರವಾರ ಈ ಆದೇಶವನ್ನು ಹೊರಡಿಸಿದೆ.

ಸಮೀಕ್ಷೆ ವರದಿಯ ಪ್ರಕಾರ ರಾಜಸ್ಥಾನದಲ್ಲಿ 63,018 ಸರಕಾರಿ ಶಾಲೆಗಳಿದ್ದು,ಇವು 5,26,162 ತರಗತಿ ಕೋಣೆಗಳನ್ನು ಒಳಗೊಂಡಿವೆ. ಈ ಪೈಕಿ 86,934 ಕೋಣೆಗಳು ಸಂಪೂರ್ಣವಾಗಿ ಶಿಥಿಲಗೊಂಡಿವೆ. 5,667

ಶಾಲೆಗಳು ಬಳಕೆಗೆ ಸಂಪೂರ್ಣವಾಗಿ ಅಸುರಕ್ಷಿತವಾಗಿವೆ. 17,109 ಟಾಯ್ಲೆಟ್‌ ಗಳು ಶಿಥಿಲ ಸ್ಥಿತಿಯಲ್ಲಿವೆ ಎಂದು ಗುರುತಿಸಲಾಗಿದ್ದು, 29,093 ಟಾಯ್ಲೆಟ್‌ ಗಳನ್ನು ದುರಸ್ತಿ ಮಾಡಬಹುದಾಗಿದೆ.

ವಿದ್ಯಾರ್ಥಿಗಳ ಓದಿಗೆ ತೊಂದರೆಯಾಗದಂತೆ ಸೂಕ್ತ ಪರ್ಯಾಯ ವ್ಯವಸ್ಥೆಗಳನ್ನು ಮಾಡುವಂತೆ ಉಚ್ಚ ನ್ಯಾಯಾಲಯವು ಸರಕಾರಕ್ಕೆ ಸೂಚಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News