ರಾಜಸ್ಥಾನದಲ್ಲಿ ಭೀಕರ ರಸ್ತೆ ದುರಂತ: ಕನಿಷ್ಠ 18 ಮೃತ್ಯು
Photo Credit : NDTV
ಜೈಪುರ,ನ.2: ರಾಜಸ್ಥಾನದಲ್ಲಿ ರವಿವಾರ ಸಂಭವಿಸಿದ ಭೀಕರ ರಸ್ತೆದುರಂತದಲ್ಲಿ ಟೂರಿಸ್ಟ್ ಬಸ್ಸೊಂದು , ರಸ್ತೆ ಬದಿ ನಿಂತಿದ್ದ ಟ್ರೇಲರ್ ಟ್ರಕ್‌ಗೆ ಡಿಕ್ಕಿ ಹೊಡೆದು, ಕನಿಷ್ಠ 18 ಮಂದಿ ಯಾತ್ರಿಕರು ಸಾವನ್ನಪ್ಪಿದ್ದಾರೆ. ಫಲೋಡಿ ಜಿಲ್ಲೆಯಲ್ಲಿ ಈ ದಾರುಣದುರಂತ ಸಂಭವಿಸಿದೆ. ಘಟನೆಯಲ್ಲಿ ಇತರ ನಾಲ್ಕು ಮಂದಿ ಗಾಯಗೊಂಡಿದ್ದಾರೆ.
ಯಾತ್ರಿಕರಿದ್ದ ಬಸ್‌ನ ಬಿಕಾನೇರ್‌ನ ಕೊಲಾಯತ್‌ನಿಂದ ಜೋಧ್‌ಪುರದ ಸುರ್‌ಸಾಗರ್‌ಗೆ ಹಿಂತಿರುಗುತ್ತಿದ್ದಾಗ, ಫಲೋಡಾ ಜಿಲ್ಲೆಯ ಮಟೋಡಾದಲ್ಲಿ ರಸ್ತೆ ಬದಿ ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಬಸ್‌ಸಂಪೂರ್ಣ ನಜ್ಜುಗುಜ್ಜಾಗಿದೆ.
ಅವಘಡದ ಮಾಹಿತಿ ತಿಳಿಯುತ್ತಲೇ ಮಟೋಡಾ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಗ್ರಾಮಸ್ಥರ ನೆರವಿನೊಂದಿಗೆ ನಜ್ಜುಗುಜ್ಜಾದ ಬಸ್‌ನಲ್ಲಿ ಸಿಲುಕಿದ್ದ ಗಾಯಾಳುಗಳನ್ನು ಹೊರಗೆಳೆದಿದ್ದಾರೆ. ಮೊದಲ ಚಿಕಿತ್ಸೆಯ ಬಳಿಕ ಅವರನ್ನು ಜೋಧ್‌ಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅತ್ಯಂತ ವೇಗವಾಗಿ ಟೂರಿಸ್ಟ್ ಬಸ್ ಅನ್ನು ಓಡಿಸುತ್ತಿದ್ದ ಚಾಲಕ, ಹಠಾತ್ತನೇ ನಿಯಂತ್ರಣ ಕಳೆದುಕೊಂಡಿದ್ದರಿಂದ ವಾಹನವು, ನಿಂತಿದ್ದ ಟ್ರೇಲರ್‌ಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು ಮುಂದಿನ ತನಿಖೆ ನಡೆಸುತ್ತಿದ್ದಾರೆ.