ಕೈಯಲ್ಲಿ ಸಂವಿಧಾನದ ಪ್ರತಿ ಹಿಡಿದು ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ ರಕೀಬುಲ್ ಹುಸೈನ್
Update: 2024-06-24 18:37 IST
Screengrab from the video | ರಕೀಬುಲ್ ಹುಸೈನ್
ಹೊಸದಿಲ್ಲಿ: ಅಸ್ಸಾಂನಿಂದ ಸಂಸದರಾಗಿ ಚುನಾಯಿತರಾಗಿರುವ ಕಾಂಗ್ರೆಸ್ ಪಕ್ಷದ ರಕೀಬುಲ್ ಹುಸೈನ್ ಕೈಯಲ್ಲಿ ಪಾಕೆಟ್ ಸಂವಿಧಾನದ ಪ್ರತಿ ಹಿಡಿದುಕೊಂಡು ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಸದನದ ಗಮನ ಸೆಳೆದರು.
ಅಸ್ಸಾಂನ ಧುಬ್ರಿ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಪ್ರತಿಸ್ಪರ್ಧಿಯಾಗಿದ್ದ ಎಐಯುಡಿಎಫ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್‌ರನ್ನು ದಾಖಲೆಯ 10,12,476 ಮತಗಳಿಂದ ಪರಾಭವಗೊಳಿಸುವ ಮೂಲಕ ರಕೀಬುಲ್ ಹುಸೈನ್ ಸಂಸದರಾಗಿ ಚುನಾಯಿತರಾಗಿದ್ದಾರೆ.
ಇದಕ್ಕೂ ಮುನ್ನ, ಇಂಡಿಯಾ ಮೈತ್ರಿಕೂಟದ ಸಂಸದರು ಸಂಸತ್ತಿನ ಹೊರಗೆ ಕೈಯಲ್ಲಿ ಸಂವಿಧಾನದ ಪ್ರತಿ ಹಿಡಿದುಕೊಂಡು ಪ್ರತಿಭಟನೆ ನಡೆಸಿದ್ದರು