×
Ad

ರಾಂಚಿ | ಲ್ಯಾಂಡಿಂಗ್ ವೇಳೆ IndiGo ವಿಮಾನದ ರೆಕ್ಕೆ ರನ್‌ವೇಗೆ ಢಿಕ್ಕಿ

Update: 2025-12-13 23:37 IST

 Photo Credit: PTI

ರಾಂಚಿ, ಡಿ. 13: ರಾಂಚಿ ವಿಮಾನ ನಿಲ್ದಾಣದಲ್ಲಿ ಇಂಡಿಗೊ ವಿಮಾನ ಇಳಿಯುವ ಸಂದರ್ಭ ಅದರ ಬಾಲ ರನ್‌ ವೇ ಗೆ ಢಿಕ್ಕಿ ಹೊಡೆದ ಘಟನೆ ನಡೆದಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಸುಮಾರು 70 ಪ್ರಯಾಣಿಕರಿದ್ದ ಭುವನೇಶ್ವರ-ರಾಂಚಿ ವಿಮಾನ ಶುಕ್ರವಾರ ರಾತ್ರಿ ಸುಮಾರು 7.30ಕ್ಕೆ ಇಳಿಯುವ ಸಂದರ್ಭ ಈ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ.

‘‘ಇಳಿಯುವ ಸಂದರ್ಭ ವಿಮಾನದ ರೆಕ್ಕೆ ರನ್‌ವೇಗೆ ಸ್ಪರ್ಶಿಸಿತು. ಪ್ರಯಾಣಿಕರಿಗೆ ಕಂಪನದ ಅನುಭವವಾಯಿತು. ಆದರೆ, ಪ್ರಯಾಣಿಕರಿಗೆ ಯಾವುದೇ ಹಾನಿ ಉಂಟಾಗಿಲ್ಲ. ಅವರು ಸುರಕ್ಷಿತವಾಗಿ ಇಳಿದಿದ್ದಾರೆ ಎಂದು ರಾಂಚಿ ವಿಮಾನ ನಿಲ್ದಾಣದ ನಿರ್ದೇಶಕ ವಿನೋದ್ ಕುಮಾರ್ ತಿಳಿಸಿದ್ದಾರೆ.

ಈ ಘಟನೆಯ ನಂತರ ವಿಮಾನ ತಾಂತ್ರಿಕವಾಗಿ ಟೇಕ್‌ ಆಫ್‌ ಗೆ ಅನರ್ಹವಾಗಿದೆ ಎಂದು ಕಂಡು ಬಂದ ಹಿನ್ನೆಲೆಯಲ್ಲಿ ಅದರ ಹಾರಾಟವನ್ನು ಸ್ಥಗಿತಗೊಳಿಸಲಾಯಿತು ಎಂದು ಅವರು ಹೇಳಿದ್ದಾರೆ.

‘‘ರಾಂಚಿಯಿಂದ ಭುವನೇಶ್ವರಕ್ಕೆ ಅದರ ಮುಂದಿನ ನಿರ್ಗಮನವನ್ನು ರದ್ದುಗೊಳಿಸಲಾಯಿತು. ಕೆಲವು ಪ್ರಯಾಣಿಕರು ತಮ್ಮ ಪ್ರಯಾಣವನ್ನು ರದ್ದುಗೊಳಿಸಿದರು. ಕೆಲವರು ತಮ್ಮ ಪ್ರಯಾಣವನ್ನು ಮರು ನಿಗದಿ ಮಾಡಿದರು. ಕೆಲವು ಪ್ರಯಾಣಿಕರನ್ನು ರಸ್ತೆಯ ಮೂಲಕ ಭುವನೇಶ್ವರಕ್ಕೆ ಕಳುಹಿಸಲಾಯಿತು’’ ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News