×
Ad

‌ಮಾದಕ ವಸ್ತು ನೀಡಿ ಮಹಿಳೆ ಮೇಲೆ ಅತ್ಯಾಚಾರ; ಆರೋಪಿಗಳ ಬಂಧನ

Update: 2024-07-04 10:12 IST

ಹೈದರಾಬಾದ್: ಮಾದಕ ವಸ್ತು ನೀಡಿ ಹಲವು ಗಂಟೆಗಳ ಕಾಲ ಕಾರಿನಲ್ಲೇ 26 ವರ್ಷ ವಯಸ್ಸಿನ ಸಹೋದ್ಯೋಗಿ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಅಮಾನುಷವಾಗಿ ಥಳಿಸಿದ ಆರೋಪದಲ್ಲಿ ಪ್ರಖ್ಯಾತ ರಿಯಲ್ ಎಸ್ಟೇಟ್ ಕಂಪನಿಯ ಇಬ್ಬರು ಮಾರಾಟ ಪ್ರತಿನಿಧಿಗಳನ್ನು ಬಂಧಿಸಲಾಗಿದೆ.

ಈ ಕೃತ್ಯ ಎಸಗಿದ ಬಳಿಕ ಆರೋಪಿಗಳು ಮಹಿಳೆಯನ್ನು ಮಿಯಾಪುರ ಎಂಬಲ್ಲಿ ಖಾಸಗಿ ಹಾಸ್ಟೆಲ್ ನ ಹೊರಭಾಗದಲ್ಲಿ ಬಿಟ್ಟು ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಈ ಸಂಬಂಧ ಸಂಗಾ ರೆಡ್ಡಿ (39) ಮತ್ತು ಜನಾರ್ದನ ರೆಡ್ಡಿ (25) ಎಂಬುವವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮಹಿಳೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಮೊದಲು ಝೀರೊ ಎಫ್ಐಆರ್ ದಾಖಲಿಸಲಾಗಿತ್ತು. ಬಳಿಕ ಇದನ್ನು ಮಿಯಾಪುರ ಠಾಣೆಗೆ ವರ್ಗಾಯಿಸಲಾಗಿತ್ತು. ಆರೋಪಿಗಳ ವಿರುದ್ಧ ಭಾರತೀಯ ದಂಡಸಂಹಿತೆ ಸೆಕ್ಷನ್ 376, 323, 509 ಮತ್ತು 420ರ ಅನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ಮಿಯಾಪುರ ಠಾಣಾಧಿಕಾರಿ ವಿ.ದುರ್ಗಾ ರಾಮಲಿಂಗ ಪ್ರಸಾದ್ ಹೇಳಿದ್ದಾರೆ.

ಸಂತ್ರಸ್ತ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News