‘ಮದುವೆ ದಿಬ್ಬಣ’ ಬಹಿಷ್ಕರಿಸಿ; ವಿದೇಶಕ್ಕೆ ಬಹುಪಕ್ಷ ನಿಯೋಗವನ್ನು ಟೀಕಿಸಿದ ರಾವತ್
Update: 2025-05-18 21:07 IST
ಸಂಜಯ್ ರಾವತ್ | PTI
ಮುಂಬೈ, ಮೇ 18: ಆಪರೇಷನ್ ಸಿಂಧೂರ್ ಹಾಗೂ ಆನಂತರ ಭುಗಿಲೆದ್ದ ಪಾಕ್ ಜೊತೆಗೆ ಭಾರತದ ಸಂಘರ್ಷದ ಕುರಿತು ಇತರ ದೇಶಗಳಿಗೆ ವಿವರಿಸಲು ವಿವಿಧ ಪಕ್ಷಗಳ 51 ಸಂಸದರನ್ನು ವಿದೇಶಕ್ಕೆ ಕಳುಹಿಸುವ ಅಗತ್ಯವೇನಿತ್ತು ಎಂದು ಶಿವಸೇನಾ ( ಉದ್ದವ್ ಬಣ) ನಾಯಕ ಸಂಜಯ್ ರಾವತ್ ರವಿವಾರ ಪ್ರಶ್ನಿಸಿದ್ದಾರೆ. ಕೇಂದ್ರ ಸರಕಾರದ ನಡೆಯನ್ನು ಅವರು ಮದುವೆ ದಿಬ್ಬಣಕ್ಕೆ ಹೋಲಿಸಿದ್ದಾರೆ.
‘‘ವಿದೇಶಕ್ಕೆ ‘ಬಾರಾತ್’ (ಮದುವೆ ದಿಬ್ಬಣ) ಕಳುಹಿಸುವ ಅಗತ್ಯವೇ ಇಲ್ಲ. ಈ ವಿಚಾರದಲ್ಲಿ ಅವಸರ ಪಡುವ ಅಗತ್ಯವಿಲ್ಲ. ಪ್ರಧಾನಿ ದುರ್ಬಲರಾಗಿದ್ದಾರೆ ಎಂದವರು ಹೇಳಿದ್ದಾರೆ. ನಿಯೋಗದಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ (ಏಕನಾಥ ಶಿಂಧೆ) ಅವರ ಪುತ್ರ ನ್ನು ಕೂಡಾ ಸೇರ್ಪಡೆಗೊಳಿಸಿರುವುದನ್ನು ಅವರು ಪ್ರಶ್ನಿಸಿದ್ದಾರೆ. ಬಿಜೆಪಿಯು ಪ್ರತಿಯೊಂದನ್ನೂ ರಾಜಕೀಯ ಗೊಳಿಸುವ ಚಾಳಿಯನ್ನು ಹೊಂದಿದೆ. ಈ ಬಾರಾತ್ ( ದಿಬ್ಬಣ)ವನ್ನು ಇಂಡಿಯಾ ಮೈತ್ರಿಕೂಟ ಬಹಿಷ್ಕರಿಸಬೇಕಾಗಿದೆ’’ ಎಂದವರು ಕರೆ ನೀಡಿದ್ದಾರೆ.