×
Ad

ಸಾಮಾಜಿಕ ಮಾಧ್ಯಮದಿಂದ ಪ್ರಧಾನಿ ಮೋದಿ, ಅವರ ತಾಯಿಯ ಎಐ ಚಿತ್ರ ತೆಗೆದು ಹಾಕಿ: ಕಾಂಗ್ರೆಸ್ ಗೆ ಪಾಟ್ನಾ ಹೈಕೋರ್ಟ್ ಸೂಚನೆ

Update: 2025-09-17 12:34 IST

File Photo: PTI

ಪಾಟ್ನಾ: ಬಿಹಾರ ಕಾಂಗ್ರೆಸ್ ಘಟಕ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ದಿವಂಗತ ತಾಯಿ ಹೀರಾ ಬೆನ್ ಅವರ ಎಐ ಚಿತ್ರವನ್ನು ತೆಗೆದು ಹಾಕುವಂತೆ ಬುಧವಾರ ಪಾಟ್ನಾ ಹೈಕೋರ್ಟ್ ಕಾಂಗ್ರೆಸ್ ಪಕ್ಷಕ್ಕೆ ಸೂಚನೆ ನೀಡಿದೆ.

ಸಾಮಾಜಿಕ ಮಾಧ್ಯಮ ವೇದಿಕೆಗಳಿಂದ ಎಐ ಚಿತ್ರವನ್ನು ತೆಗೆದು ಹಾಕುವಂತೆ ಹಂಗಾಮಿ ಮುಖ್ಯ ನ್ಯಾಯಾಧೀಶ ಪಿ.ಬಿ.ಬಜಂತ್ರಿ ಆದೇಶಿಸಿದ್ದಾರೆ.

ಸೆಪ್ಟೆಂಬರ್ 10ರಂದು ಬಿಹಾರ ಕಾಂಗ್ರೆಸ್ ಘಟಕ ವಿಡಂಬನಾತ್ಮಕ ವಿಡಿಯೊವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿತ್ತು.

ಈ ವಿಡಿಯೊವನ್ನು ಖಂಡಿಸಿದ್ದ ಬಿಜೆಪಿ ಹಾಗೂ NDA ಮಿತ್ರಪಕ್ಷಗಳು, ಪ್ರಧಾನಿಯನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ಇಂತಹ ತಂತ್ರಗಳ ಮೊರೆ ಹೋಗಿರುವುದು ನಾಚಿಕೆಗೇಡು ಎಂದು ತರಾಟೆಗೆ ತೆಗೆದುಕೊಂಡಿದ್ದವು.

ಆದರೆ, ಈ ಆರೋಪಗಳನ್ನು ತಳ್ಳಿ ಹಾಕಿದ್ದ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿಗಾಗಲಿ ಅಥವಾ ಅವರ ದಿವಂಗತ ತಾಯಿಗಾಗಲಿ ಯಾವುದೇ ಅಗೌರವ ತೋರಿಲ್ಲ ಎಂದು ಸಮರ್ಥಿಸಿಕೊಂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News