×
Ad

ತಮಿಳುನಾಡಿನ Foxconn ಘಟಕದಲ್ಲಿ ವಿವಾಹಿತ ಮಹಿಳೆಯರಿಗೆ ಉದ್ಯೋಗ ನೀಡಲಾಗುತ್ತಿಲ್ಲ: Reuters ತನಿಖಾ ವರದಿ

Update: 2024-06-26 17:55 IST

PC : PTI |  ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ತಮಿಳುನಾಡಿನಲ್ಲಿರುವ Foxconn ಐಫೋನ್‌ ಅಸೆಂಬ್ಲಿ ಘಟಕದಲ್ಲಿ ಉದ್ಯೋಗ ನೀಡಿಕೆ ವೇಳೆಗೆ ವಿವಾಹಿತ ಮಹಿಳೆಯರಿಗೆ ಅವಕಾಶ ನೀಡಲಾಗುತ್ತಿಲ್ಲ “ಅವಿವಾಹಿತ ಮಹಿಳೆಯರಿಗೆ ಹೋಲಿಸಿದಾಗ ಅವರಿಗೆ ಹೆಚ್ಚು ಕೌಟುಂಬಿಕ ಜವಾಬ್ದಾರಿಗಳಿವೆ” ಎಂಬ ಕಾರಣಕ್ಕೆ ಹೀಗೆ ಮಾಡಲಾಗುತ್ತಿದೆ ಎಂದು Reuters ತನಿಖಾ ವರದಿಯೊಂದು ಕಂಡುಕೊಂಡಿದೆ.

ಫಾಕ್ಸ್‌ಕಾನ್ನ್‌ ಕಂಪನಿಯಲ್ಲಿ ಉದ್ಯೋಗ ಅರಸಿ ಬರುವ ವಿವಾಹಿತ ಮಹಿಳೆಯರಿಗೆ ಅಲ್ಲಿನ ಆವರಣದೊಳಕ್ಕೆ ಪ್ರವೇಶಿಸಲೂ ಅನುಮತಿಸಲಾಗುತ್ತಿಲ್ಲ, ಅಲ್ಲಿನ ಭದ್ರತಾ ಸಿಬ್ಬಂದಿಗಳು ಪ್ರವೇಶ ಕಲ್ಪಿಸುವ ಮುನ್ನ ವೈವಾಹಿಕ ಸ್ಥಿತಿಯನ್ನು ಕೇಳುತ್ತಾರೆಂದು ವರದಿ ಹೇಳಿದೆ.

ಕೌಟುಂಬಿಕ ಕರ್ತವ್ಯಗಳು, ಗರ್ಭಧಾರಣೆ ಮತ್ತು ಹೆಚ್ಚು ಗೈರಾಗುತ್ತಾರೆ ಮುಂತಾದ ಕಾರಣ ನೀಡಿ ಈ ಕಂಪನಿಯು ವಿವಾಹಿತ ಮಹಿಳೆಯರಿಗೆ ಉದ್ಯೋಗ ನೀಡುತ್ತಿಲ್ಲ ಎಂದು ಅಲ್ಲಿನ ಹಾಲಿ ಮತ್ತು ಮಾಜಿ ಉದ್ಯೋಗಿಗಳ ಮಾತುಗಳನ್ನಾಧರಿಸಿ ವರದಿಯಲ್ಲಿ ವಿವರಿಸಲಾಗಿದೆ.

ಆದರೆ ಕಂಪೆನಿಯ ಅಧಿಕ ಉತ್ಪಾದನಾ ಅವಧಿಯ ವೇಳೆ ಹಾಗೂ ತೈವಾನ್‌ನಲ್ಲಿ ಉದ್ಯೋಗಿಗಳ ಕೊರತೆ ಎದುರಿಸುವ ಸಂದರ್ಭದಲ್ಲಿ ತನ್ನ ನಿಯಮವನ್ನು ಕಂಪನಿ ಸಡಿಲಗೊಳಿಸುತ್ತದೆ ಎಂದು ವರದಿ ಹೇಳಿದೆಯಲ್ಲದೆ ಇನ್ನು ಕೆಲ ಸಂದರ್ಭಗಳಲ್ಲಿ ಉದ್ಯೋಗ ಏಜನ್ಸಿಗಳೂ ಮಹಿಳೆಯರ ವೈವಾಹಿಕ ಸ್ಥಿತಿಯನ್ನು ಮರೆಮಾಡಲು ಸಹಾಯ ಮಾಡಿವೆ ಎಂದು ತಿಳಿಸಿದೆ.

ಬಾಹ್ಯ ಏಜನ್ಸಿಗಳ ಮೂಲಕ ಫಾಕ್ಸ್‌ಕಾನ್ನ್‌ ಉದ್ಯೋಗಿಗಳ ನೇಮಕಾತಿ ನಡೆಸುತ್ತದೆ ಈ ಏಜನ್ಸಿಗಳು ಅಧಿಕೃತ ಸೇವಾ ಪೂರೈಕೆದಾರರು ಎಂದು ತಮಿಳುನಾಡು ಸರ್ಕಾರದಿಂದ ನೋಂದಣಿ ಪಡೆದವುಗಳಾಗಿವೆ. ಆದರೆ ಉದ್ಯೋಗ ನೀಡಿಕೆಯಲ್ಲಿ ತಾರತಮ್ಯದ ಕುರಿತಾದ ಪ್ರಶ್ನೆಗಳಿಗೆ ಸರ್ಕಾರವಾಗಲಿ, ಈ ಏಜನ್ಸಿಗಳಾಗಲಿ ಪ್ರತಿಕ್ರಿಯಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News