×
Ad

ಶೀಘ್ರದಲ್ಲೇ ರಶ್ಯ ಅಧ್ಯಕ್ಷ ಪುಟಿನ್ ಭಾರತಕ್ಕೆ ಭೇಟಿ : ಅಜಿತ್ ಧೋವಲ್ ಮಾಹಿತಿ

Update: 2025-08-07 22:45 IST

Photo Credit: PTI 

ಹೊಸದಿಲ್ಲಿ,ಆ.7: ಶೀಘ್ರದಲ್ಲೇ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಭಾರತಕ್ಕೆ ಭೇಟಿ ನೀಡಲಿದ್ದಾರೆಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಗುರುವಾರ ತಿಳಿಸಿದ್ದಾರೆ. ರಶ್ಯ ಅಧ್ಯಕ್ಷರ ಭಾರತ ಪ್ರವಾಸದ ದಿನಾಂಕಗಳನ್ನು ಅಂತಿಮಗೊಳಿಸಲಾಗುತ್ತಿದೆಯೆಂದು ಅವರು ತಿಳಿಸಿದ್ದಾರೆ.

ಭಾರತದ ಸರಕುಗಳಿಗೆ ಅಮೆರಿಕ ಶೇ.50 ಸುಂಕ ವಿಧಿಸಿರುವ ಹಿನ್ನೆಲೆಯಲ್ಲಿ ಹೊಸದಿಲ್ಲಿ ಹಾಗೂ ವಾಶಿಂಗ್ಟನ್ ಬಾಂಧವ್ಯದಲ್ಲಿ ಬಿಕ್ಕಟ್ಟು ಉಂಟಾಗಿರುವ ನಡುವೆಯೇ ಈ ಬೆಳವಣಿಗೆಯಾಗಿರುವುದು ಹೆಚ್ಚಿನ ಮಹತ್ವ ಪಡೆದಿದೆ. ರಶ್ಯದಿಂದ ತೈಲ ಖರೀದಿಗಾಗಿ ಭಾರತದ ಸರಕುಗಳಿಗೆ ಶೇ.50ರಷ್ಟು ಸುಂಕವಿಧಿಸುವ ಕಾರ್ಯಕಾರಿ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಸಹಿ ಹಾಕಿದ್ದರು.

ಉಕ್ರೇನ್ ಮೇಲಿನ ಯುದ್ದವನ್ನು ನಿಲ್ಲಿಸಲು ರಶ್ಯವು ಸಮ್ಮತಿಸದೇ ಇದ್ದಲ್ಲಿ ಆ ದೇಶದ ತೈಲವನ್ನು ಖರೀದಿಸುವ ದೇಶಗಳ ಮೇಲೆ ನಿರ್ಬಂಧಗಳನ್ನು ವಿಧಿಸುವುದಾಗಿಯೂ ಟ್ರಂಪ್ ಎಚ್ಚರಿಕೆ ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News