×
Ad

ಅನುವಾದಿತ ಕೃತಿಗಳಿಗೆ 2023ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ

Update: 2024-03-11 23:41 IST

ಹೊಸದಿಲ್ಲಿ : ಕೇಂದ್ರ ಸಾಹಿತ್ಯ ಅಕಾಡೆಮಿ ನೀಡುವ ಭಾಷಾಂತರ ಪ್ರಶಸ್ತಿಗೆ ಕನ್ನಡ ವಿಭಾಗದಲ್ಲಿ ಲೇಖಕ ಕೆ.ಕೆ. ಗಂಗಾಧರನ್ ಅವರ ‘ಮಲೆಯಾಳಂ ಕಥೆಗಳು’ ಕೃತಿ ಆಯ್ಕೆಯಾಗಿದೆ.

ಇದು ಸೇರಿದಂತೆ ವಿವಿಧ ಭಾಷೆಗಳ 24 ಕೃತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಭಾಷಾಂತರ ಪ್ರಶಸ್ತಿಯನ್ನು ಸೋಮವಾರ ಪ್ರಕಟಿಸಿದೆ.

ಕೆ.ಕೆ. ಗಂಗಾಧರನ್ ಅವರು ತಮ್ಮ ‘ಮಲೆಯಾಳಂ ಕಥೆಗಳು’ ಕೃತಿಯಲ್ಲಿ ಮಲೆಯಾಳಂ ಭಾಷೆಯ ವಿವಿಧ ಲೇಖಕರ ಕಥೆಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ.

ಲೇಖಕಿ ನಾಗರತ್ನ ಹೆಗ್ಡೆ ಅವರ ‘ರುಚಿರಾಹ್ ಬಾಲಕಥಾ’ ಕೃತಿಗೆ ಸಂಸ್ಕೃತ ವಿಭಾಗದಲ್ಲಿ ಪ್ರಶಸ್ತಿ ದೊರಕಿದೆ. ಇದು ಲೇಖಕಿ ಸುಧಾಮೂರ್ತಿ ಅವರ ‘ಮಕ್ಕಳಿಗಾಗಿ ನನ್ನ ನೆಚ್ಚಿನ ಕತೆಗಳು’ ಕೃತಿಯ ಸಂಸ್ಕೃತ ಭಾಷಾಂತರ.

ಶಿವರಾಮ ಕಾರಂತರ ‘ಚೋಮನ ದುಡಿ’ ಕೃತಿಯನ್ನು ಕಾಶ್ಮೀರಿ ಭಾಷೆಗೆ ಗುಲ್ಝಾರ್ ಅಹ್ಮದ್ ರಥೇರ್ ಅವರು ‘ಚೋಮ ಸುಂಡ್ ಡೋಲ್’ ಹೆಸರಿನಲ್ಲಿ ಭಾಷಾಂತರಿಸಿದ್ದು, ಈ ಕೃತಿಗೆ ಕಾಶ್ಮೀರಿ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ.

ಪ್ರಶಸ್ತಿ ಒಟ್ಟು 50 ಸಾವಿರ ರೂ. ನಗದು ಹಾಗೂ ಪ್ರಶಸ್ತಿಪತ್ರ ಒಳಗೊಂಡಿದೆ. ಕನ್ನಡ ವಿಭಾಗದ ಆಯ್ಕೆ ಸಮಿತಿಯಲ್ಲಿ ವಿಮರ್ಶಕಿ ಎಂ.ಎಸ್. ಆಶಾದೇವಿ, ಕಥೆಗಾರ ಕೇಶವ ಮಳಗಿ ಮತ್ತು ಪ್ರೊ. ಎಸ್. ಸಿರಾಜ್ ಅಹ್ಮದ್ ಇದ್ದರು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News