×
Ad

ಚೂರಿ ಇರಿತ ಪ್ರಕರಣದ ನಂತರ ಸೈಫ್ ಅಲಿ ಖಾನ್ ಗೆ ರಕ್ಷಣೆ ಒದಗಿಸಲಿರುವ ರೋನಿತ್ ರಾಯ್ ಕಂಪೆನಿ

Update: 2025-01-23 19:07 IST

ಸೈಫ್ ಅಲಿ ಖಾನ್ , ರೋನಿತ್ ರಾಯ್ | PC : PTI 

ಮುಂಬೈ: ಬಾಲಿವುಡ್ ನಟ ರೋನಿತ್ ರಾಯ್ ಒಡೆತನದ ಭದ್ರತಾ ಸಂಸ್ಥೆ ಏಸ್ ಸೆಕ್ಯೂರಿಟಿ ಆ್ಯಂಡ್ ಪ್ರೊಟೆಕ್ಷನ್ ಕಂಪನಿ ದರೋಡೆ ಪ್ರಯತ್ನದ ಸಂದರ್ಭದಲ್ಲಿ ದಾಳಿಕೋರನಿಂದ ಹಲವು ಬಾರಿ ಇರಿತಕ್ಕೊಳಗಾಗಿದ್ದ ಬಾಲಿವುಡ್ ನಟ ಸೈಫ್ ಅಲಿ ಖಾನ್ ನಿವಾಸಕ್ಕೆ ಭದ್ರತೆ ಒದಗಿಸಲಿದೆ ಎಂದು Times Entertainment ವರದಿ ಮಾಡಿದೆ.

ಜನವರಿ 16ರಂದು ಬಾಂದ್ರಾದಲ್ಲಿನ ತಮ್ಮ ನಿವಾಸಕ್ಕೆ ದರೋಡೆಗೆಂದು ಬಂದಿದ್ದ ದಾಳಿಕೋರನಿಂದ ಹಲವು ಬಾರಿ ಚಾಕು ಇರಿತಕ್ಕೆ ಒಳಗಾಗಿದ್ದ ನಟ ಸೈಫ್ ಅಲಿ ಖಾನ್, ಚಿಕಿತ್ಸೆಯ ನಂತರ ಚೇತರಿಸಿಕೊಂಡಿದ್ದು, ಲೀಲಾವತಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಆದರೆ, ಸೈಫ್ ಅಲಿ ಖಾನ್ ರ 12 ಅಂತಸ್ತಿನ ನಿವಾಸಕ್ಕೆ ಭದ್ರತೆ ಇದ್ದರೂ, ಅದನ್ನು ಏರುವಲ್ಲಿ ಸಫಲವಾಗಿದ್ದ ನುಸುಳುಕೋರನು, ಅವರ ಮನೆಯೊಳಕ್ಕೂ ನುಗ್ಗಿದ್ದ ಸಂಗತಿ ಸೈಫ್ ಅಲಿ ಖಾನ್ ಭದ್ರತೆ ಕುರಿತು ಕಳವಳವನ್ನುಂಟು ಮಾಡಿದೆ. ಹೀಗಾಗಿ ರೋನಿತ್ ರಾಯ್ ಒಡೆತನದ ಏಸ್ ಸೆಕ್ಯೂರಿಟಿ ಆ್ಯಂಡ್ ಪ್ರೊಟೆಕ್ಷನ್ ಕಂಪನಿ ಸೈಫ್ ಅಲಿ ಖಾನ್ ರ ನಿವಾಸಕ್ಕೆ ಭದ್ರತೆ ಒದಗಿಸಲಿದೆ ಎಂದು ವರದಿಯಾಗಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News