×
Ad

ಸಕ್ಷಮ್ ತಾಟೆ ಥಳಿಸಿ ಹತ್ಯೆ ಪ್ರಕರಣ| ಕೃತ್ಯಕ್ಕೆ ಪೊಲೀಸರಿಂದಲೇ ಪ್ರಚೋದನೆ ಆರೋಪಿಸಿದ ಪ್ರೇಯಸಿ ಅಂಚಲ್

Update: 2025-12-01 22:14 IST

Photo Credit : X \ @vani_mehrotra

ಹೊಸದಿಲ್ಲಿ, ಡಿ. 1: ಅಂತರ್‌ಜಾತಿ ಸಂಬಂಧದ ಹಿನ್ನೆಲೆಯಲ್ಲಿ ಸಕ್ಷಮ್ ತಾಟೆ (20)ಯನ್ನು ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಥಳಿಸಿ ಹತ್ಯೆಗೈದ ದಿನಗಳ ಬಳಿಕ ಆತನ ಪ್ರೇಯಸಿ ಅಂಚಲ್ ಮಾಮಿದ್ವಾರ್ (21), ಸಕ್ಷಮ್ ಮೇಲೆ ದಾಳಿ ಮಾಡಲು ತನ್ನ ಸಹೋದರರನ್ನು ಪ್ರಚೋದಿಸಿದ ಜನರಲ್ಲಿ ಇಬ್ಬರು ಪೊಲೀಸರು ಕೂಡ ಸೇರಿದ್ದಾರೆ ಎಂದು ಆರೋಪಿಸಿದ್ದಾರೆ.

ಸಕ್ಷಮ್‌ನ ಮೃತದೇಹವನ್ನು ಅಂಚಲ್ ವರಿಸಿದ ಹೃದಯ ವಿದ್ರಾವಕ ದೃಶ್ಯಗಳು ಸಾಮಾಜಿಕ ಮಾದ್ಯಮದಲ್ಲಿ ಹರಿದಾಡುತ್ತಿದೆ. ತಮ್ಮ ವಿವಾಹ ನಿರ್ಧಾರವನ್ನು ಒಪ್ಪಿಕೊಳ್ಳುವುದಾಗಿ ತನ್ನ ಕುಟುಂಬದ ಸದಸ್ಯರು ತನಗೆ ಹಾಗೂ ಸಕ್ಷಮ್‌ಗೆ ಭರವಸೆ ನೀಡಿದ್ದರು ಎಂದು ಅಂಚಲ್ ಸುದ್ದಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ

‘‘ನಾವು ಮೂರು ವರ್ಷಗಳಿಂದ ಜೊತೆಯಲ್ಲಿದ್ದೆವು. ನಾವು ಬಹಳಷ್ಟು ಕನಸುಗಳನ್ನು ಕಂಡಿದ್ದೆವು. ನಮ್ಮ ವಿವಾಹ ಏರ್ಪಡಿಸುವುದಾಗಿ ನನ್ನ ಸಹೋದರರು ಭರವಸೆ ನೀಡಿದ್ದರು. ಆದರೆ, ಕೊನೆ ಘಳಿಗೆಯಲ್ಲಿ ಅವರು ನಮಗೆ ದ್ರೋಹ ಎಸಗಿದರು’’ ಎಂದು ಅವರು ಹೇಳಿದ್ದಾರೆ.

ತನಗೆ ಇನ್‌ಸ್ಟ್ರಾಗ್ರಾಂ ಮೂಲಕ ಸಕ್ಷಮ್‌ನ ಪರಿಚಯವಾಯಿತು. ತನ್ನ ಸಹೋದರರ ಮೂಲಕ ಅಲ್ಲ ಎಂದು ಅಂಚಲ್ ಸ್ಪಷ್ಟಪಡಿಸಿದ್ದಾರೆ. ತನ್ನ ಕುಟುಂಬದ ಸದಸ್ಯರು ಸಕ್ಷಮ್‌ನೊಂದಿಗೆ ಸಮಯ ಕಳೆಯುತ್ತಿದ್ದರು ಎಂದು ಅವರು ಹೇಳಿದ್ದಾರೆ. ‘‘ಅವರು ಅಂಚಲ್‌ನೊಂದಿಗೆ ಅನ್ಯೋನ್ಯವಾಗಿದ್ದರು. ಜೊತೆಯಾಗಿ ತಿನ್ನುತ್ತಿದ್ದರು. ಆದರೆ, ಎಲ್ಲವೂ ಚೆನ್ನಾಗಿ ನಡೆಯಲಿದೆ ಎಂದು ಅವರು ಅವನಿಗೆ ಮನವರಿಕೆ ಮಾಡಿದರು. ನಮಗೆ ಈ ರೀತಿ ಆಗುತ್ತದೆ ಎಂದು ತಿಳಿದಿರಲಿಲ್ಲ’’ ಎಂದು ಅವರು ಹೇಳಿದ್ದಾರೆ.

ಸಕ್ಷಮ್ ‘‘ಜೈ ಭೀಮವಾಲ’ (ದಲಿತ) ಎಂದು ತನ್ನ ಕುಟುಂಬದ ಸದಸ್ಯರು ಹೇಳಿದ್ದರು. ಒಂದು ದಿನ ತನ್ನ ತಂದೆ ಸಕ್ಷಮ್‌ನಲ್ಲಿ, ‘‘ನೀನು ನನ್ನ ಮಗಳನ್ನು ವಿವಾಹವಾಗಲು ಬಯಸುವುದಾದರೆ, ನಮ್ಮ ಧರ್ಮ (ಹಿಂದೂ ಧರ್ಮ)ಕ್ಕೆ ಸೇರಬೇಕು’’ ಎಂದು ಹೇಳಿದರು. ತನ್ನನ್ನು ವಿವಾಹವಾಗಲು ಸಕ್ಷಮ್ ಏನನ್ನು ಮಾಡಲು ಕೂಡ ಸಿದ್ಧನಿದ್ದ. ಆದರೆ, ಏನಾಯಿತು ಎಂದು ನನಗೆ ತಿಳಿದಿಲ್ಲ ಎಂದು ಅಂಚಲ್ ಹೇಳಿದ್ದಾರೆ.

‘‘ನಾನು ಕಳೆದ 3 ವರ್ಷಗಳಿಂದ ಸಕ್ಷಮ್‌ನನ್ನು ಪ್ರೀತಿಸುತ್ತಿದ್ದೆ. ಆದರೆ, ಬೇರೆ ಬೇರೆ ಜಾತಿ ಆಗಿರುವ ಕಾರಣಕ್ಕೆ ನನ್ನ ತಂದೆ ನಮ್ಮ ಸಂಬಂಧವನ್ನು ವಿರೋಧಿಸಿದರು. ನನ್ನ ಕುಟುಂಬ ಸಕ್ಷಮ್‌ನನ್ನು ಕೊಲ್ಲುವುದಾಗಿ ಆಗಾಗ ಬೆದರಿಕೆ ಹಾಕಿದೆ. ಈಗ ನನ್ನ ತಂದೆ ಹಾಗೂ ಸಹೋದರರಾದ ಹಿಮೇಶ್ ಹಾಗೂ ಸಾಹಿಲ್ ಅದನ್ನು ಮಾಡಿದ್ದಾರೆ. ನನಗೆ ನ್ಯಾಯ ಬೇಕು. ಆರೋಪಿಗಳನ್ನು ನೇಣಿಗೆ ಹಾಕಬೇಕೆಂದು ನಾನು ಬಯಸುತ್ತೇನೆ’’ ಎಂದು ಅಂಚಲ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News