×
Ad

‘ಟೈಗರ್ 3’ ಪ್ರದರ್ಶನ ವೇಳೆ ಚಿತ್ರಮಂದಿರದೊಳಗೆ ಪಟಾಕಿ ಸಿಡಿಸಿದ ಸಲ್ಮಾನ್ ಖಾನ್ ಅಭಿಮಾನಿಗಳು; ಆತಂಕಕ್ಕೊಳಗಾದ ವೀಕ್ಷಕರು

Update: 2023-11-13 22:18 IST

Photo : twitter

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ‘ಟೈಗರ್ 3’ ಸಿನಿಮಾದ ಪ್ರದರ್ಶನ ನಡೆಯುತ್ತಿದ್ದಾಗ ಖಾನ್ ಅಭಿಮಾನಿಗಳು ಚಿತ್ರಮಂದಿರದೊಳಗೆ ಪಟಾಕಿಗಳನ್ನು ಸಿಡಿಸಿ ಇತರ ವೀಕ್ಷಕರನ್ನು ಆತಂಕಕ್ಕೆ ಗುರಿಯಾಗಿಸಿದ ಘಟನೆ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಾಲೆಗಾಂವನಲ್ಲಿ ನಡೆದಿದೆ.

ರವಿವಾರ ರಾತ್ರಿ ಮೋಹನ ಚಿತ್ರಮಂದಿರದಲ್ಲಿ ಪ್ರದರ್ಶನ ನಡೆಯುತ್ತಿದ್ದಾಗ ಅಭಿಮಾನಿಗಳ ಗುಂಪೊಂದು ಒಳಗೆ ಪಟಾಕಿಗಳನ್ನು ಸಿಡಿಸಿತ್ತು. ಇದರಿಂದ ವೀಕ್ಷಕರು ಆತಂಕಕ್ಕೀಡಾಗಿದ್ದರು. ಈ ಬಗ್ಗೆ ಪ್ರಕರಣವನ್ನು ದಾಖಲಿಸಲಾಗಿದ್ದು, ಆರೋಪಿಗಳನ್ನು ಇನ್ನಷ್ಟೇ ಪತ್ತೆ ಹಚ್ಚಬೇಕಿದೆ ಎಂದು ಪೋಲಿಸರು ತಿಳಿಸಿದರು.

ಈ ನಡುವೆ ಖಾನ್,ಯಾರಿಗೂ ಅಪಾಯವನ್ನು ಒಡ್ಡದೆ ಚಿತ್ರವನ್ನು ಆನಂದಿಸುವಂತೆ ಸೋಮವಾರ ಎಕ್ಸ್ ಪೋಸ್ಟ್ ನಲ್ಲಿ ತನ್ನ ಅಭಿಮಾನಿಗಳನ್ನು ಕೋರಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News