×
Ad

ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ: ಬಿಷ್ಣೋಯ್ ಗ್ಯಾಂಗ್ ಜೊತೆ ಸಂಧಾನಕ್ಕೆ 5 ಕೋಟಿ ರೂ.ಗೆ ಬೇಡಿಕೆ

Update: 2024-10-18 11:50 IST

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಕೊಲೆ ಬೆದರಿಕೆ ಹಾಕಿರುವ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್, ಸಂಧಾನಕ್ಕಾಗಿ 5 ಕೋಟಿ ರೂ.ಗೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ.

ಈ ಕುರಿತ ಬೆದರಿಕೆಯ ವಾಟ್ಸಾಪ್ ಸಂದೇಶವು ಮುಂಬೈ ಟ್ರಾಫಿಕ್ ಪೊಲೀಸರಿಗೆ ತಲುಪಿದೆ. ಒಂದು ವೇಳೆ ಹಣವನ್ನು ಪಾವತಿಸದಿದ್ದರೆ, ಇತ್ತೀಚೆಗೆ ಬಿಷ್ಣೋಯ್ ಗ್ಯಾಂಗ್ ಸದಸ್ಯರಿಂದ ಹತ್ಯೆಗೀಡಾದ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದೀಕಿಗಿಂತ ಕೆಟ್ಟದಾಗಿ ನಟನನ್ನು ಹತ್ಯೆ ಮಾಡಲಾಗುವುದು ಎಂದು ಬೆದರಿಕೆ ಹಾಕಲಾಗಿದೆ.

"ಇದನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ಸಲ್ಮಾನ್ ಖಾನ್ ಬದುಕಿ ಉಳಿಯಬೇಕಾದರೆ ಲಾರೆನ್ಸ್ ಬಿಷ್ಣೋಯ್ ಜೊತೆಗಿನ ದ್ವೇಷಕ್ಕೆ ಅಂತ್ಯ ಹಾಡಲು ಬಯಸಿದರೆ ಬಯಸಿದರೆ 5 ಕೋಟಿ ರೂ. ನೀಡಬೇಕು. ಹಣ ನೀಡದಿದ್ದರೆ ಬಾಬಾ ಸಿದ್ದೀಕಿಗಿಂತ ಅವರ ಸ್ಥಿತಿ ಕೆಟ್ಟದಾಗುತ್ತದೆ," ಎಂದು ಬೆದರಿಕೆ ಸಂದೇಶ ತಿಳಿಸಿದೆ.

ಮೂಲಗಳ ಪ್ರಕಾರ, ಮುಂಬೈ ಪೊಲೀಸರು ಸಂದೇಶದ ಮೂಲವನ್ನು ಪತ್ತೆಹಚ್ಚವುದರಲ್ಲಿ ನಿರತರಾಗಿದ್ದಾರೆ ಎನ್ನಲಾಗಿದೆ. ಈಗಾಗಲೇ ಸಲ್ಮಾನ್ ಖಾನ್ ಅವರ ಬಾಂದ್ರಾ ನಿವಾಸದ ಸುತ್ತಲೂ ಭದ್ರತೆಯನ್ನು ಹೆಚ್ಚಿಸಲಾಗಿದೆ.

Full View


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News