×
Ad

ಪತ್ರಕರ್ತನ ಮೊಬೈಲ್ ವಶ; ಪೊಲೀಸರಿಗೆ ಕೇರಳ ಹೈಕೋರ್ಟ್ ತರಾಟೆ

Update: 2023-07-11 22:36 IST

ಕೇರಳ ಉಚ್ಚ ನ್ಯಾಯಾಲಯ | Photo : PTI

ಹೊಸದಿಲ್ಲಿ: ಆನ್ಲೈನ್ ಮಾಧ್ಯಮ ಸಂಸ್ಥೆಯೊಂದು ಭಾಗಿಯಾಗಿದ್ದ ಪ್ರಕರಣದ ತನಿಖೆಯೊಂದರ ಸಂದರ್ಭ ಪತ್ರಕರ್ತರೋರ್ವರ ಮೊಬೈಲ್ ಫೋನ್ ವಶಪಡಿಸಿಕೊಂಡಿರುವುದಕ್ಕೆ ಕೇರಳ ಉಚ್ಚ ನ್ಯಾಯಾಲಯ ಸೋಮವಾರ ರಾಜ್ಯ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ.

‘ಮರುನಾಡನ್ ಮಲಯಾಳಿ’ಯ ಸಂಪಾದಕ ಶಾಜನ್ ಝಕರಿಯಾ ಭಾಗಿಯಾಗಿದ್ದ ಪ್ರಕರಣದ ತನಿಖೆ ನಡೆಯುತ್ತಿರುವ ಸಂದರ್ಭ ಹಿರಿಯ ಪತ್ರಕರ್ತ ಜಿ. ವೈಶಾಖನ್ ಅವರ ಮೊಬೈಲ್ ಫೋನ್ ಅನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು.

ಪ್ರಕರಣದಲ್ಲಿ ಪತ್ರಕರ್ತ ಶಂಕಿತನೂ ಅಲ್ಲ, ಆರೋಪಿಯೂ ಅಲ್ಲದೇ ಇರುವಾಗ ಮೊಬೈಲ್ ಫೋನ್ ವಶಪಡಿಸಿಕೊಂಡಿರುವ ಹಿಂದಿನ ಪೊಲೀಸರ ತಾರ್ಕಿಕತೆಯನ್ನು ಪ್ರಶ್ನಿಸಿ ವೈಶಾಖನ್ ಅವರು ಕೇರಳ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News