×
Ad

232 ಕೋಟಿ ರೂ.ವಂಚನೆ ಆರೋಪ : ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಹಿರಿಯ ವ್ಯವಸ್ಥಾಪಕನನ್ನು ಬಂಧಿಸಿದ ಸಿಬಿಐ

Update: 2025-09-02 13:33 IST

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ : 232 ಕೋಟಿ ರೂ.ವಂಚನೆ ಆರೋಪಕ್ಕೆ ಸಂಬಂಧಿಸಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (ಎಎಐ) ಹಿರಿಯ ವ್ಯವಸ್ಥಾಪಕ ರಾಹುಲ್ ವಿಜಯ್ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.

2019 ಮತ್ತು 2023ರ ನಡುವೆ ಡೆಹ್ರಾಡೂನ್ ವಿಮಾನ ನಿಲ್ದಾಣದಲ್ಲಿ ರಾಹುಲ್ ವಿಜಯ್ ವ್ಯವಸ್ಥಾಪಕನಾಗಿ ಕರ್ತವ್ಯದಲ್ಲಿದ್ದಾಗ ಅಕ್ರಮ ನಡೆದಿದೆ ಎಎಐ ದೂರು ನೀಡಿತ್ತು. ಈ ಕುರಿತ ತನಿಖೆಯ ವೇಳೆ ಬಿಲ್‌ಗಳನ್ನು ನಕಲು ಮಾಡಿರುವುದು, ಬಿಲ್‌ಗಳಿಗೆ ಆಕಸ್ಮಿಕವಾಗಿ ಹೆಚ್ಚುವರಿ ಸೊನ್ನೆಗಳನ್ನು ಸೇರಿಸುವ ಮೂಲಕ ಭಾರೀ ಅವ್ಯವಹಾರ ಮಾಡಿರುವುದು ಬಹಿರಂಗವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಸೇರಿದ 232 ಕೋಟಿ ರೂ.ಗಳನ್ನು ರಾಹುಲ್ ವಿಜಯ್ ವೈಯಕ್ತಿಕ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದು, ನಂತರ ಬ್ಯುಸಿನೆಸ್ ಖಾತೆಗೆ ಆ ಹಣವನ್ನು ವರ್ಗಾಯಿಸಿ ಸಾರ್ವಜನಿಕ ಸಂಸ್ಥೆಗೆ ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಡೆಹ್ರಾಡೂನ್‌ನಲ್ಲಿ ಕರ್ತವ್ಯದಲ್ಲಿದ್ದಾಗ ದಾಖಲೆಗಳನ್ನು ತಿರುಚಿ ವ್ಯವಸ್ಥಿತ ರೀತಿಯಲ್ಲಿ ಎಎಐ ನಿಧಿಯನ್ನು ದುರುಪಯೋಗ ಮಾಡಿದ್ದಾರೆ ಎಂದು ಎಎಐ ಹಣಕಾಸು ವಿಭಾಗದ ಹಿರಿಯ ವ್ಯವಸ್ಥಾಪಕ ಚಂದ್ರಕಾಂತ್ ಪಿ ಅವರು ರಾಹುಲ್ ವಿಜಯ್ ವಿರುದ್ಧ ದೂರು ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News