×
Ad

ಬಂಗಾಳಕೊಲ್ಲಿಯಲ್ಲಿ ‘ಸೆನ್ಯಾರ್’ ಚಂಡಮಾರುತ ಭೀತಿ

Update: 2025-11-20 22:11 IST

ಸಾಂದರ್ಭಿಕ ಚಿತ್ರ | Photo Credit : PTI  

ಕೋಲ್ಕತಾ,ನ.20: ಬಂಗಾಳಕೊಲ್ಲಿಯಲ್ಲಿ ‘ಸೆನ್ಯಾರ್’ ಚಂಡಮಾರುತ ರೂಪುಗೊಳ್ಳುತ್ತಿದ್ದು, ಅಂಡಮಾನ್ ನಿಕೋಬಾರ್ ದ್ವೀಪಪ್ರದೇಶದಲ್ಲಿ ಭಾರೀ ಮಳೆಯಾಗಲಿದೆಯೆಂದು ಭಾರತೀಯ ಹವಾಮಾನ ಇಲಾಖೆ ಗುರುವಾರ ಮುನ್ನೆಚ್ಚರಿಕೆ ನೀಡಿದೆ.

ನವೆಂಬರ್ 21ರಿಂದ ಚಂಡಮಾರುತದ ರೂಪುಗೊಳ್ಳುವಿಕೆ ತೀವ್ರರೂಪ ಪಡೆಯಲಿದೆ. ಇದರಿಂದಾಗಿ ನಿಕೋಬಾರ್ ದ್ವೀಪದ ಕೆಲವೆಡೆ ಅತ್ಯಧಿಕ (070ಸೆಂ.ಮೀ.ನಿಂದ 20 ಸೆಂ.ಈ.ವರೆಗೆ)ಮಳೆ ಸುರಿಯಲಿದೆ. ಅಂಡಮಾನ್‌ ನಲ್ಲೂ 70ರಿಂದ 11 ಸೆಂ.ಮೀ.ವರೆಗೆ ಮಳೆಯಾಗುವ ನಿರೀಕ್ಷೆಯಿದೆಯೆಂದು ಹವಾಮಾನ ಇಲಾಖೆ ತಿಳಿಸಿದೆ.

ನವೆಂಬರ್ 24 ಹಾಗೂ 25ರಂದು ಅಂಡಮಾನ್ ಹಾಗೂ ನಿಕೋಬಾರ್ ದ್ವೀಪದ ಒಂದೆರಡು ಸ್ಥಳಗಳಲ್ಲಿ ಗುಡುಗು ಸಿಡಿಲಿನ ಜೊತೆಗೆ ತಾಸಿಗೆ 40ರಿಂದ 50 ಕಿ.ಮೀ. ವೇಗದಲ್ಲಿ ಭಾರೀ ಬಿರುಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News