×
Ad

ಹರ್ಯಾಣ: ನಿಲ್ಲಿಸಿದ್ದ ಕಾರಿನಲ್ಲಿ ಒಂದೇ ಕುಟುಂಬದ ಏಳು ಮಂದಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

Update: 2025-05-27 11:47 IST

Screengrab:X/@PTI_News

ಚಂಡೀಗಢ: ಹರ್ಯಾಣದ ಪಂಚಕುಲದಲ್ಲಿ ನಿಲ್ಲಿಸಿದ್ದ ಕಾರಿನೊಳಗೆ ಡೆಹ್ರಾಡೂನ್‌ ನ ಒಂದೇ ಕುಟುಂಬದ ಏಳು ಮಂದಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಪಂಚಕುಲದ ಸೆಕ್ಟರ್ 27 ರ ವಸತಿ ಪ್ರದೇಶದಲ್ಲಿ ಕಾರು ನಿಂತಿತ್ತು ಎಂದು ತಿಳಿದು ಬಂದಿದೆ.ಘಟನೆ ನಿನ್ನೆ ತಡರಾತ್ರಿ ಬೆಳಕಿಗೆ ಬಂದಿದೆ.

ಪೊಲೀಸರು ಆಗಮಿಸಿದಾಗ, ಕಾರಿನೊಳಗೆ 40 ವರ್ಷ ವಯಸ್ಸಿನ ವಿವಾಹಿತ ದಂಪತಿಗಳು, ಮೂವರು ಮಕ್ಕಳು ಮತ್ತು ಇಬ್ಬರು ವೃದ್ಧರು ಮೃತಪಟ್ಟಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

"ನಾವು ಪ್ರಕರಣವನ್ನು ಎಲ್ಲಾ ಕೋನಗಳಿಂದ ತನಿಖೆ ನಡೆಸುತ್ತಿದ್ದೇವೆ. ಈ ಕುರಿತು ಸ್ಥಳೀಯ ಜನರನ್ನು ಪ್ರಶ್ನಿಸುತ್ತಿದ್ದೇವೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದೇವೆ" ಎಂದು ಹರಿಯಾಣದ ಪಂಚಕುಲದ ಡಿಸಿಪಿ (ಅಪರಾಧ) ಅಮಿತ್ ದಹಿಯಾ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News