ಆಂಧ್ರಪ್ರದೇಶ | ಭದ್ರತಾ ಪಡೆಗಳಿಂದ 7 ಮಂದಿ ಮಾವೋವಾದಿಗಳ ಹತ್ಯೆ
ಮಂಗಳವಾರ ಮಾವೋವಾದಿ ಕಮಾಂಡರ್ ಸಹಿತ 6 ಮಾವೋವಾದಿಗಳನ್ನು ಹತ್ಯೆಗೈದಿದ್ದ ಭದ್ರತಾ ಪಡೆ
ಸಾಂದರ್ಭಿಕ ಚಿತ್ರ (PTI)
ಅಮರಾವತಿ : ಮಾವೋವಾದಿ ಕಮಾಂಡರ್ ಮದ್ವಿ ಹಿದ್ಮಾ ಹತ್ಯೆ ಬೆನ್ನಲ್ಲೆ ಆಂಧ್ರಪ್ರದೇಶದ ಮಾರೆಡುಮಿಲ್ಲಿ ಅರಣ್ಯ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆಗಳು ಏಳು ಮಂದಿ ಮಾವೋವಾದಿಗಳನ್ನು ಹತ್ಯೆ ಮಾಡಿದ್ದಾರೆ.
ವಿಜಯವಾಡದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗುಪ್ತಚರ ಇಲಾಖೆಯ ಎಡಿಜಿಪಿ ಮಹೇಶ್ ಚಂದ್ರ ಲಡ್ಡಾ, ಬುಧವಾರ ಹತ್ಯೆಯಾದವರಲ್ಲಿ ಮೂವರು ಮಹಿಳೆಯರು ಸೇರಿದ್ದಾರೆ ಎಂದು ಹೇಳಿದರು.
ಹತ್ಯೆಗೀಡಾದ ಮಾವೋವಾದಿಗಳ ಗುರುತು ಪತ್ತೆ ಕಾರ್ಯ ನಡೆಯುತ್ತಿದೆ. ಅವರಲ್ಲಿ ಒಬ್ಬರನ್ನು ಶ್ರೀಕಾಕುಳಂ ಮೂಲದ ಮೇತುರಿ ಜೋಖಾ ರಾವ್ ಅಲಿಯಾಸ್ ಟೆಕ್ ಶಂಕರ್ ಎಂದು ಗುರುತಿಸಲಾಗಿದೆ ಎಂದು ಲಡ್ಡಾ ಹೇಳಿದರು.
ಮಂಗಳವಾರ ಆಂಧ್ರದ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮಾವೋವಾದಿ ಸಂಘಟನೆಯ ಕೇಂದ್ರ ಸಮಿತಿ ಸದಸ್ಯ, ಮಾವೋವಾದಿ ಕಮಾಂಡರ್ ಮದ್ವಿ ಹಿದ್ಮಾ ಮತ್ತು ಆತನ ಪತ್ನಿ ಮದಕಂ ರಾಜೆ ಸೇರಿದಂತೆ ಆರು ನಕ್ಸಲರನ್ನು ಪೊಲೀಸರು ಹತ್ಯೆ ಮಾಡಿದ್ದರು.