ಸಮಾಜಕ್ಕೆ ಸರಕಾರದ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವವರ ಅಗತ್ಯವಿದೆ: ಕೇಂದ್ರ ಸಚಿವ ನಿತಿನ್ ಗಡ್ಕರಿ
Update: 2025-07-15 13:16 IST
ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ (Photo: PTI)
ನಾಗ್ಪುರ: ಸಾರ್ವಜನಿಕ ಆಡಳಿತದಲ್ಲಿ ಶಿಸ್ತು ಕಾಪಾಡಲು ಸರಕಾರದ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣಗಳನ್ನು ದಾಖಲಿಸುವವರ( ಮೊಕದ್ದಮೆ ಹೂಡುವವರ) ಅಗತ್ಯವಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ನಾಗ್ಪುರದಲ್ಲಿ ದಿವಂಗತ ಪ್ರಕಾಶ್ ದೇಶಪಾಂಡೆ ಸ್ಮೃತಿ ಕುಶಾಲ್ ಸಂಘಟಕ್ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ನಿತಿನ್ ಗಡ್ಕರಿ, ಸರಕಾರಕ್ಕೆ ಮಾಡಲು ಸಾಧ್ಯವಾಗದ ಕೆಲಸಗಳನ್ನು ನ್ಯಾಯಾಲಯದ ಆದೇಶಗಳಿಂದ ಮಾಡಬಹುದು ಎಂದು ಹೇಳಿದರು.
ಸಮಾಜದಲ್ಲಿ ಸರಕಾರದ ವಿರುದ್ಧ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವ ಕೆಲವು ಜನರು ಇರಬೇಕು. ಇದು ರಾಜಕಾರಣಿಗಳಲ್ಲಿ ಶಿಸ್ತನ್ನು ಕಲಿಸುತ್ತದೆ. ಏಕೆಂದರೆ ಸರಕಾರದಲ್ಲಿರುವ ಮಂತ್ರಿಗಳಿಗೂ ಸಾಧ್ಯವಿಲ್ಲದ ಕೆಲಸ ನ್ಯಾಯಾಲಯದ ಆದೇಶದಿಂದ ಸಾಧ್ಯವಾಗುತ್ತದೆ ಎಂದು ನಿತಿನ್ ಗಡ್ಕರಿ ಹೇಳಿದರು.