×
Ad

ಗುಜರಾತ್‌ | ಲಿವ್ ಇನ್ ಸಂಗಾತಿಯನ್ನು ಹತ್ಯೆ ಮಾಡಿ ಆಕೆ ಕರ್ತವ್ಯದಲ್ಲಿದ್ದ ಪೊಲೀಸ್‌ ಠಾಣೆಗೆ ಶರಣಾದ ಸಿಆರ್‌ಪಿಎಫ್‌ ಕಾನ್ಸ್ಟೇಬಲ್

Update: 2025-07-20 11:31 IST

Photo | NDTV

ಗಾಂಧಿನಗರ : ಗುಜರಾತ್‌ನ ಕಛ್ ಜಿಲ್ಲೆಯಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಕಾನ್ಸ್ಟೇಬಲ್ ತನ್ನ ಲಿವ್ ಇನ್ ಸಂಗಾತಿ ಮಹಿಳಾ ಪೊಲೀಸ್ ಅಧಿಕಾರಿಯನ್ನು ಹತ್ಯೆ ಮಾಡಿ ಆಕೆ ಕರ್ತವ್ಯ ಕರ್ತವ್ಯದಲ್ಲಿದ್ದ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.

ಅರುಣಾಬೆನ್ ನಟುಭಾಯಿ ಜಾದವ್ ಹತ್ಯೆಯಾದ ಎಎಸ್ಐ. ಇವರನ್ನು ಕಛ್‌ ಜಿಲ್ಲೆಯ ಅಂಜರ್ ಪೊಲೀಸ್ ಠಾಣೆಯಲ್ಲಿ ಸಹಾಯಕ ಎಎಸ್ಐ ಆಗಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.

ಶುಕ್ರವಾರ ಅರುಣಾಬೆನ್ ಮತ್ತು ದಿಲೀಪ್ ನಡುವೆ ವಾಗ್ವಾದ ನಡೆದು ಅರುಣಾಬೆನ್‌ರನ್ನು ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ ಎಂದು ಅಂಜರ್ ವಿಭಾಗದ ಡಿವೈಎಸ್‌ಪಿ ಮುಖೇಶ್ ಚೌಧರಿ ಹೇಳಿದ್ದಾರೆ.

ಮಣಿಪುರದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯಲ್ಲಿ ನಿಯೋಜನೆಗೊಂಡಿರುವ ಆರೋಪಿ ದಿಲೀಪ್, ಅರುಣಾಬೆನ್ ಜೊತೆ ದೀರ್ಘಕಾಲದ ಸಂಬಂಧವನ್ನು ಹೊಂದಿದ್ದನು. ಇಬ್ಬರೂ ವಿವಾಹವಾಗಲು ಯೋಜಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News