ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಸಂಸ್ಥೆಗೆ ಭೂಮಿ ಹಂಚಿಕೆ ರದ್ದುಗೊಳಿಸಿದ ಲಡಾಖ್ ಆಡಳಿತ
Update: 2025-08-23 18:36 IST
ಸೋನಮ್ ವಾಂಗ್ಚುಕ್ | PTI
ಲಡಾಖ್ : ಲೇಹ್‌ನ ಫಿಯಾಂಗ್ ಗ್ರಾಮದಲ್ಲಿರುವ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ಸಂಸ್ಥೆಗೆ 2018ರಲ್ಲಿ ಹಂಚಿಕೆ ಮಾಡಿದ್ದ ಭೂಮಿಯನ್ನು ಲಡಾಖ್ ಆಡಳಿತ ರದ್ದುಗೊಳಿಸಿರುವ ಬಗ್ಗೆ ವರದಿಯಾಗಿದೆ.
ಶಿಕ್ಷಣ ಸುಧಾರಕ ಮತ್ತು ಪರಿಸರ ಹೋರಾಟಗಾರರಾದ ವಾಂಗ್ಚುಕ್ ಲಡಾಖ್‌ಗೆ ಆರನೇ ಶೆಡ್ಯೂಲ್ ಸ್ಥಾನಮಾನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು.
ಲೇಹ್‌ನ ಉಪ ಆಯುಕ್ತರು ಈ ಕುರಿತು ಆದೇಶವನ್ನು ಹೊರಡಿಸಿದ್ದು, ʼಭೂಮಿಯನ್ನು ಹಿಮಾಲಯನ್ ಇನ್ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಲರ್ನಿಂಗ್‌ಗೆ 40 ವರ್ಷಗಳ ಕಾಲ ಗುತ್ತಿಗೆಗೆ ನೀಡಲಾಗಿದೆ. ಇಲ್ಲಿಯವರೆಗೆ ಯಾವುದೇ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗಿಲ್ಲ. ಆದ್ದರಿಂದ ಜಮೀನಿನ ಮೇಲಿನ ಹಕ್ಕುಗಳನ್ನು ರದ್ದುಗೊಳಿಸಿ ವಶಕ್ಕೆ ಪಡೆಯಲಾಗುವುದುʼ ಎಂದು ತಿಳಿಸಿದ್ದಾರೆ.