×
Ad

ಗೋವಾ: ಬಜರಂಗದಳದ ಕಾರ್ಯಕರ್ತರ ವಿವರ ಸಂಗ್ರಹಿಸಲು ಸೂಚಿಸಿದ ಬೆನ್ನಲ್ಲೇ ಮಹಿಳಾ ಎಸ್ಪಿ ವರ್ಗಾವಣೆ

Update: 2025-01-29 13:27 IST

ಸುನಿತಾ ಸಾವಂತ್ (Photo: citizen.goapolice.gov.in)

ಪಣಜಿ: ಬಜರಂಗದಳದ ನಾಯಕರು ಮತ್ತು ಕಾರ್ಯಕರ್ತರ ಮಾಹಿತಿ ಸಂಗ್ರಹಿಸಲು ಎಲ್ಲಾ ಪೊಲೀಸ್ ಠಾಣೆಗಳಿಗೆ ವೈರ್ ಲೆಸ್ ಸಂದೇಶ ಕಳುಹಿಸಿದ ಕೆಲವೇ ಗಂಟೆಗಳಲ್ಲಿ ದಕ್ಷಿಣ ಗೋವಾದ ಪೊಲೀಸ್ ವರಿಷ್ಠಾಧಿಕಾರಿ(ಎಸ್ಪಿ) ಸುನಿತಾ ಸಾವಂತ್ ಅವರನ್ನು ವರ್ಗಾವಣೆ ಮಾಡಲಾಗಿದೆ Times of India ವರದಿ ಮಾಡಿದೆ.

ಸಾಮಾನ್ಯವಾಗಿ, ಎಸ್ ಪಿ ಮಟ್ಟದ ಅಧಿಕಾರಿಗಳ ವರ್ಗಾವಣೆ ಆದೇಶಗಳನ್ನು ರಾಜ್ಯ ಸರ್ಕಾರ ಹೊರಡಿಸುತ್ತದೆ, ಆದರೆ ಈ ಪ್ರಕರಣದಲ್ಲಿ, ವೈರ್ ಲೆಸ್ ಸಂದೇಶದ ಮೂಲಕವೇ ಸುನಿತಾ ಸಾವಂತ್ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಹೇಳಲಾಗಿದೆ. ಸುನಿತಾ ಸಾವಂತ್ ಅವರ ಸ್ಥಾನಕ್ಕೆ ಆ್ಯಂಟಿ ನಾರ್ಕೋಟಿಕ್ಸ್ ಸೆಲ್ ಎಸ್ಪಿ ಟಿಕಮ್ ಸಿಂಗ್ ವರ್ಮಾ ಅವರನ್ನು ನೇಮಿಸಲಾಗಿದೆ.

ಸೋಮವಾರ ಬೆಳಿಗ್ಗೆ ಸುನಿತಾ ಸಾವಂತ್ ಕಳುಹಿಸಿದ ಸಂದೇಶದ ಆಧಾರದ ಮೇಲೆ ಠಾಣಾಧಿಕಾರಿಗಳು, ಬಜರಂಗದಳದ ಮುಖಂಡರು ಮತ್ತು ಸದಸ್ಯರ ವಿವರ ಸಂಗ್ರಹಿಸಲು ಪ್ರಾರಂಭಿಸಿದ್ದಾರೆ. ಈ ಬಗ್ಗೆ ಬಜರಂಗದಳದ ಹಿರಿಯ ನಾಯಕರಿಗೆ ಮಾಹಿತಿ ರವಾನೆಯಾಗಿ ಎಸ್ಪಿಯನ್ನು ವರ್ಗಾಯಿಸುವಂತೆ ಒತ್ತಡ ಹೇರಿದ್ದಾರೆ ಎಂದು ಹೇಳಲಾಗಿದೆ.

ಗೋವಾ ಪೊಲೀಸ್‌ ಇಲಾಖೆಯ ಉನ್ನತಾಧಿಕಾರಿಗಳು ಸಾವಂತ್ ಅವರಿಗೆ ಎಸ್ಪಿ ಕಚೇರಿ ತೆರವುಗೊಳಿಸುವಂತೆ ವೈರ್ ಲೆಸ್ ಸಂದೇಶವನ್ನು ಕಳುಹಿಸಿದ್ದಾರೆ. ತಡರಾತ್ರಿ ಸಾವಂತ್ ಅವರು ವೈರ್ ಲೆಸ್ ಸಂದೇಶವನ್ನು ಕಳುಹಿಸಿ ಆದೇಶವನ್ನು ಪಾಲಿಸಿರುವುದಾಗಿ ತಿಳಿಸಿದ್ದಾರೆ. ಬಳಿಕ ಪೊಲೀಸ್ ಪ್ರಧಾನ ಕಚೇರಿಗೆ ಹಾಜರಾಗುವಂತೆ ಸಾವಂತ್ ಗೆ ಸೂಚಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News