×
Ad

ನೈರುತ್ಯ ರೈಲ್ವೆ ತಂಡ ಚಾಂಪಿಯನ್, ಮೌಂಟ್ಸ್ ಕ್ಲಬ್ ರನ್ನರ್ಸ್ ಅಪ್

Update: 2024-03-10 23:57 IST

Photo: timesofindia

ಬೆಂಗಳೂರು : ಶ್ರುತಿ ಹಾಗೂ ಸತ್ಯ ಅವರ ಅಮೋಘ ಆಟದ ಬಲದಿಂದ ನೈರುತ್ಯ ರೈಲ್ವೆ ತಂಡವು ಶುಕ್ರವಾರ ಮುಕ್ತಾಯವಾದ ಮಾತೃ ಕಪ್ ಗಾಗಿ ನಡೆದ 7ನೇ ರಾಜ್ಯಮಟ್ಟದ ಎಸ್.ಎಂ.ಎನ್. ಸ್ಮಾರಕ ಮಹಿಳಾ ಬ್ಯಾಸ್ಕೆಟ್ ಬಾಲ್ ಲೀಗ್ ಟೂರ್ನಿಯಲ್ಲಿ ಚಾಂಪಿಯನ್ ಟ್ರೋಫಿ ಗೆದ್ದುಕೊಂಡಿತು.

ಶ್ರೀ ಕಂಠೀರವ ಕ್ರೀಡಾಂಗಣದ ಒಳಾಂಗಣ ಕೋರ್ಟ್ ನಲ್ಲಿ ನಡೆದ ಟೂರ್ನಿಯ ಫೈನಲ್ ಲೀಗ್ ಸುತ್ತಿನಲ್ಲಿ ರೈಲ್ವೆ ತಂಡವು 78–39 ಅಂತರದಿಂದ ಮೌಂಟ್ಸ್ ಕ್ಲಬ್ ವಿರುದ್ಧ ಜಯಿಸಿತು. ರೈಲ್ವೆ ತಂಡದ ಶ್ರುತಿ (28) ಹಾಗೂ ಸತ್ಯ (17) ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಮೌಂಟ್ಸ್ ಕ್ಲಬ್ ತಂಡದ ನಿಹಾರಿಕಾ (15) ಹಾಗೂ ಜಾಹ್ನವಿ (8) ಉತ್ತಮವಾಗಿ ಆಡಿದರು.

3ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಬೀಗಲ್ಸ್ ಬ್ಯಾಸ್ಕೆಟ್ ಬಾಲ್ ಕ್ಲಬ್ 63–47 ರಿಂದ ಬೆಂಗಳೂರು ವ್ಯಾನ್ ಗಾರ್ಡ್ಸ್ ವಿರುದ್ಧ ಜಯ ಸಾಧಿಸಿತು. ಬೀಗಲ್ಸ್ನ ತಿಶಾ (19) ಮತ್ತು ಪ್ರಿಯಾಂಕಾ (11) ಉತ್ತಮವಾಗಿ ಆಡಿದರು.

ವಿಜೇತ ತಂಡಕ್ಕೆ 60 ಸಾವಿರ ರೂ. , ರನ್ನರ್ಸ್ ಅಪ್ ತಂಡಕ್ಕೆ 40 ಸಾವಿರ ರೂ., ಮೂರನೇ ಸ್ಥಾನ ಪಡೆದ ತಂಡಕ್ಕೆ 20 ಸಾವಿರ ರೂ. ಹಾಗೂ ನಾಲ್ಕನೇ ಸ್ಥಾನ ಗಿಟ್ಟಿಸಿದ ತಂಡಕ್ಕೆ 10 ಸಾವಿರ ರೂ. ನೀಡಲಾಯಿತು.

ವಿಜೇತರಿಗೆ ಕನ್ನಡ ಸಿನಿಮಾ ತಾರೆ ಪ್ರೇಮ್, ಜ್ಯೋತಿ ಪ್ರೇಮ್ ಮತ್ತು ಅಮೃತಾ ಪ್ರೇಮ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಫಿಬಾ ಏಷ್ಯಾ ಅಧ್ಯಕ್ಷ ಕೆ. ಗೋವಿಂದರಾಜ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News