ಶ್ರೀಲಂಕಾ ನೌಕಾ ಪಡೆಯಿಂದ 14 ಮೀನುಗಾರರ ಬಂಧನ
Update: 2025-11-10 20:49 IST
Photo Credit : indiatoday.in
ಚೆನ್ನೈ, ನ. 10: ಅಂತರರಾಷ್ಟ್ರೀಯ ಸಾಗರ ಗಡಿ (ಐಎಂಬಿಎಲ್) ಅನ್ನು ದಾಟಿದ ಹಾಗೂ ಶ್ರೀಲಂಕಾ ಸಮದ್ರದ ಅನಲೈತೀವು ಸಮೀಪ ಮೀನುಗಾರಿಕೆ ನಡೆಸಿದ ಆರೋಪದಲ್ಲಿ ತಮಿಳುನಾಡಿನ ಒಟ್ಟು 14 ಮಂದಿ ಮೀನುಗಾರರನ್ನು ಶ್ರೀಲಂಕಾ ನೌಕಾ ಪಡೆ ಸೋಮವಾರ ಬಂಧಿಸಿದೆ.
ಶ್ರೀಲಂಕಾ ನೌಕಾ ಪಡೆ ಮೀನುಗಾರರನ್ನು ಬಂಧಿಸಿರುವುದಲ್ಲದೆ, ಅವರ ದೋಣಿಗಳನ್ನು ಕೂಡ ವಶಕ್ಕೆ ತೆಗೆದುಕೊಂಡಿದೆ. ಇದರಿಂದ ತಮಿಳುನಾಡು ಹಾಗೂ ಪುದುಚೇರಿಯ ಕರಾವಳಿಯ ಮೀನುಗಾರರ ಸಮುದಾಯಗಳಲ್ಲಿ ಉದ್ವಗ್ನತೆ ಮೂಡಿದೆ.
ಶ್ರೀಲಂಕಾ ನೌಕಾ ಪಡೆ ಬಂಧಿತ ಮೀನುಗಾರರ ತನಿಖೆ ಆರಂಭಿಸಿದೆ. ಬಂಧಿತರು ಈಗ ಶ್ರೀಲಂಕಾದಲ್ಲಿ ಕಾನೂನು ಪ್ರಕ್ರಿಯೆಗಳನ್ನು ಎದುರಿಸುತ್ತಿದ್ದಾರೆ.
ಈ ಮೀನುಗಾರರು ನವೆಂಬರ್ 3ರಂದು ತಂರಂಗಂಬಾಡಿ ಮೀನುಗಾರಿಕಾ ಬಂದರಿನಿಂದ ಯಾತ್ರೀಕೃತ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದರು ಎಂದು ಮೂಲಗಳು ತಿಳಿಸಿವೆ.