ಫೆವಿಕಾಲ್ ಟ್ರೇಡ್‍ಮಾರ್ಕ್ ಉಲ್ಲಂಘನೆ ಆರೋಪ: ಸ್ಟೇಷನರಿ ಕಂಪನಿಗೆ 50 ಲಕ್ಷ ದಂಡ
Update: 2024-08-31 15:58 IST
ಸಾಂದರ್ಭಿಕ ಚಿತ್ರ (Photo: Facebook/Fevicol)
ಮುಂಬೈ: ಫೆವಿಕಾಲ್ ಟ್ರೇಡ್‍ಮಾರ್ಕ್ ಉಲ್ಲಂಘನೆ ಆರೋಪದಲ್ಲಿ ಸ್ಟೇಷನರಿ ಕಂಪನಿಯೊಂದಕ್ಕೆ 50 ಲಕ್ಷ ರೂಪಾಯಿ ದಂಡ ವಿಧಿಸಿ ಬಾಂಬೆ ಹೈಕೋರ್ಟ್ ತೀರ್ಪು ನೀಡಿದೆ.
ಜನಪ್ರಿಯ ಫೆವಿಕಾಲ್ ಬ್ರಾಂಡ್ ಉತ್ಪಾದಿಸುತ್ತಿರುವ ಪಿಡಿಲೈಟ್ ಇಂಡಸ್ಟ್ರಿಸ್, ಕಂಪನಿಯ ಬ್ರಾಂಡನ್ನೇ ಹೋಲುವ ಅಂಟಿನ ಬಾಟಲಿ ಮತ್ತು ಗಮ್ ಬಾಟಲಿಯನ್ನು ಮಾರುಕಟ್ಟೆಗೆ ತರುತ್ತಿರುವ ಪ್ರಿಮಿಯರ್ ಸ್ಟೇಷನರಿ ಇಂಡಸ್ಟ್ರೀಸ್ ಮೇಲೆ ದಾವೆ ಹೂಡಿತ್ತು.
ನ್ಯಾಯಮೂರ್ತಿ ರಿಯಾಝ್ ಚಾಗ್ಲಾ ಅವರು ಪ್ರಿಮಿಯರ್ ಕಂಪನಿಗೆ ದಂಡ ವಿಧಿಸಿದ್ದು, 2017ರ ಆದೇಶವನ್ನು ಕಂಪನಿ ಉಲ್ಲಂಘಿಸಿದೆ ಎಂದು ತೀರ್ಪಿನಲ್ಲಿ ಹೇಳಿದ್ದಾರೆ. ಫೆವಿಕಾಲ್‍ನಂಥೆ ಕಾಣುವ ಅಂಟನ್ನು ಮಾರುಕಟ್ಟೆಗೆ ಬಿಡುಗಡೆ ಮಾಡದಂತೆ ನ್ಯಾಯಾಲಯ ಆದೇಶ ನೀಡಿತ್ತು. ಇದನ್ನು ಉಲ್ಲಂಘಿಸಿ, ಅಂಥದ್ದೇ ಉತ್ಪನ್ನಗಳನ್ನು ಪ್ರಿಮಿಯರ್ ಮಾರಾಟ ಮಾಡುತ್ತಿದೆ ಎಂದು ಆಪಾದಿಸಿ ಪಿಡಿಲೈಟ್ ನ್ಯಾಯಾಲಯದ ಮೊರೆ ಹೋಗಿತ್ತು.