ಐಐಟಿ-ಖರಗ್‌ಪುರದಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ವಿದ್ಯಾರ್ಥಿಯ ಮೃತದೇಹ ಪತ್ತೆ
ಸಾಂದರ್ಭಿಕ ಚಿತ್ರ (credit: Grok)
ಖರಗ್‌ಪುರ, ಸೆ. 20: ಐಐಟಿ-ಖರಗ್‌ಪುರದ ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಇಲ್ಲಿನ ಸಂಶೋಧನಾ ವಿದ್ಯಾರ್ಥಿಯೋರ್ವನ ಮೃತದೇಹ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಶನಿವಾರ ಪತ್ತೆಯಾಗಿದೆ.
ಮೃತ ಸಂಶೋಧನಾ ವಿದ್ಯಾರ್ಥಿಯನ್ನು ಜಾರ್ಖಂಡ್‌ನ ಹರ್ಷಕುಮಾರ್ ಪಾಂಡೆ (27) ಎಂದು ಗುರುತಿಸಲಾಗಿದೆ. ಹರ್ಷ ಕುಮಾರ್ ಪಾಂಡೆ ಮೆಕಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪಿಎಚ್‌ಡಿ ಮಾಡುತ್ತಿದ್ದರು. ಈ ಘಟನೆ ಕುರಿತು ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮನೋಜ್ ಕುಮಾರ್ ಪಾಂಡೆ ತನ್ನ ಪುತ್ರ ಹರ್ಷ ಕುಮಾರ್ ಪಾಂಡೆಗೆ ದೂರವಾಣಿ ಕರೆ ಮಾಡಿದಾಗ ಅವರು ಸ್ವೀಕರಿಸುತ್ತಿರಲಿಲ್ಲ. ಅವರು ಐಐಟಿಯ ಭದ್ರತಾ ಸಿಬ್ಬಂದಿಯನ್ನು ಸಂಪರ್ಕಿಸಿದರು. ಭದ್ರತಾ ಸಿಬ್ಬಂದಿ ತೆರಳಿ ಪರಿಶೀಲಿಸಿದಾಗ ಹರ್ಷ ಕುಮಾರ್ ಪಾಂಡೆಯ ಕೊಠಡಿಯ ಬಾಗಿಲಿನ ಚಿಲಕವನ್ನು ಒಳಗಿನಿಂದ ಹಾಕಲಾಗಿತ್ತು. ಅನಂತರ ಕಾಲೇಜಿನ ಆಡಳಿತ ಮಂಡಳಿ ಹಿಜ್ಲಿ ಪೊಲೀಸರಿಗೆ ಮಾಹಿತಿ ನೀಡಿತ್ತು. ಪೊಲೀಸರು ಬಾಗಿಲು ಒಡೆದು ಒಳಗೆ ಪ್ರವೇಶಿಸಿದಾಗ ನೇಣು ಹಾಕಿಕೊಂಡು ಸ್ಥಿತಿಯಲ್ಲಿ ಮನೋಜ್ ಪಾಂಡೆಯ ಮೃತದೇಹ ಪತ್ತೆಯಾಗಿದೆ.
ಈ ಘಟನೆಯೊಂದಿಗೆ ಐಐಟಿ ಖರಗ್‌ಪುರದಲ್ಲಿ ಈ ವರ್ಷ ಮಾತ್ರ ಸಂಭವಿಸಿದ ಅಸ್ವಾಬಾವಿಕ ಸಾವಿನ ಪ್ರಕರಣಗಳ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಈ ಹಿಂದಿನ ಐದು ಪ್ರಕರಣಗಳಲ್ಲಿ ಕೂಡ ವಿದ್ಯಾರ್ಥಿಗಳ ಮೃತದೇಹ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕೊನೆಯ ಪ್ರಕರಣ ಜುಲೈಯಲ್ಲಿ ಸಂಭವಿಸಿತ್ತು.