×
Ad

ಬಿಹಾರದ ಮತದಾರರ ಕರಡು ಪಟ್ಟಿಯ ಪ್ರಕಟಣೆ ತಡೆಗೆ ಸುಪ್ರೀಂ ನಿರಾಕರಣೆ

Update: 2025-07-28 21:19 IST

ಸುಪ್ರೀಂ ಕೋರ್ಟ್ | PC : PTI 

ಹೊಸದಿಲ್ಲಿ, ಜು. 28: ಬಿಹಾರದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬಳಿಕ ಮತದಾರರ ಕರಡು ಪಟ್ಟಿಯನ್ನು ಆಗಸ್ಟ್ 1ರಂದು ಪ್ರಕಟಿಸಲು ಚುನಾವಣಾ ಆಯೋಗಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.

ಮತದಾರರ ಗುರುತನ್ನು ಸಾಬೀತುಪಡಿಸಲು ಆಧಾರ್ ಹಾಗೂ ಮತದಾರರ ಚೀಟಿಗಳು ಸಾಂವಿಧಾನಿಕ ಮಾನ್ಯತೆ ಹೊಂದಿವೆಯೇ ಎನ್ನುವುದನ್ನು ನಿರ್ಣಯಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ಸೂಚಿಸಿತು.

ವಿಚಾರಣೆ ಸಂದರ್ಭ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಹಾಗೂ ಜೋಯ್‌ಮಲ್ಯ ಬಾಗ್ಚಿ ಅವರನ್ನು ಒಳಗೊಂಡ ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ, ಒಂದು ವೇಳೆ ಯಾವುದಾದರೂ ಅಕ್ರಮ ಪತ್ತೆಯಾದರೆ, ನ್ಯಾಯಾಲಯ ಸಂಪೂರ್ಣ ಪ್ರಕ್ರಿಯೆನ್ನು ರದ್ದುಗೊಳಿಸಲಿದೆ ಎಂದು ಸ್ಪಷ್ಟಪಡಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News