×
Ad

ಮಹಿಳಾ ವಕೀಲರ POSH ದೂರುಗಳಿಗೆ ಸಂಬಂಧಿಸಿದಂತೆ ಅರ್ಜಿ; ಕೇಂದ್ರ ಸರಕಾರ, ಬಾರ್ ಕೌನ್ಸಿಲ್ ಗೆ ಸುಪ್ರೀಂ ನೊಟೀಸ್

Update: 2025-11-21 19:28 IST

ಸುಪ್ರೀಂ ಕೋರ್ಟ್ | Photo Credit : sci.gov.in

ಹೊಸದಿಲ್ಲಿ: ಬಾರ್ ಕೌನ್ಸಿಲ್ ಗಳ ಮುಂದೆ ಮಹಿಳಾ ವಕೀಲರು ಇತರ ವಕೀಲರ ಮೇಲೆ ಮಾಡುವ ಆರೋಪಗಳಿಗೆ POSH ಕಾಯ್ದೆ ಅನ್ವಯವಾಗುವುದಿಲ್ಲ ಎಂಬ ಬಾಂಬೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಮೇಲ್ಮನವಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರಕಾರ ಹಾಗೂ ಬಾರ್ ಕೌನ್ಸಿಲ್ ಆಫ್ ಇಂಡಿಯಾಗೆ ಶುಕ್ರವಾರ ಸುಪ್ರೀಂ ಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ನ್ಯಾ. ಬಿ.ವಿ.ನಾಗರತ್ನ ಮತ್ತು ನ್ಯಾ. ಆರ್.ಮಹಾದೇವನ್ ಅವರನ್ನೊಳಗೊಂಡ ನ್ಯಾಯಪೀಠ ಈ ನೋಟಿಸ್ ಜಾರಿಗೊಳಿಸಿದ್ದು, ಈ ವಿಷಯವನ್ನು ಇಂತಹುದೇ ಮತ್ತೊಂದು ಮೇಲ್ಮನವಿಯೊಂದಿಗೆ ಸೇರ್ಪಡೆಗೊಳಿಸಿದೆ.

ಜುಲೈ 7ರ ಬಾಂಬೆ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮಹಿಳಾ ವಕೀಲರ ಸಂಘ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಿತು.

ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಕಾಯ್ದೆ (POSH), 2013 ಬಾರ್ ಕೌನ್ಸಿಲ್ ಗಳಿಗೆ ಅನ್ವಯವಾಗುವುದಿಲ್ಲ ಎಂಬ ಬಾಂಬೆ ಹೈಕೋರ್ಟ್ ತೀರ್ಪಿನಿಂದ ಮಹಿಳಾ ವಕೀಲರಿಗೆ ಯಾವುದೇ ಪರಿಹಾರ ದೊರೆಯದಂತಾಗಿದೆ ಎಂದು ಈ ಮೇಲ್ಮನವಿಯಲ್ಲಿ ವಾದಿಸಲಾಗಿದೆ.

ವಕೀಲರ ಕಾಯ್ದೆ, 1961ರ ಸೆಕ್ಷನ್ 35ರ ಅಡಿಯಲ್ಲಿ ಮಹಿಳಾ ವಕೀಲರು ಬಾರ್ ಕೌನ್ಸಿಲ್ ಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಬಾಂಬೆ ಹೈಕೋರ್ಟ್ ನೀಡಿರುವ ತೀರ್ಪನ್ನು ಈ ಮೇಲ್ಮನವಿಯಲ್ಲಿ ಪ್ರಶ್ನಿಸಲಾಗಿದೆ.

ವಕೀಲರ ವೃತ್ತಿಪರ ದುರ್ನಡತೆಗೆ ವಕೀಲರ ಕಾಯ್ದೆ, 1961ರ ಸೆಕ್ಷನ್ 35ರ ಅಡಿ ಶಿಕ್ಷೆ ನೀಡುತ್ತದೆ. ಆದರಿದು ಲೈಂಗಿಕ ದೌರ್ಜನ್ಯಕ್ಕಿಂತ ವಿಭಿನ್ನವಾಗಿದೆ ಎಂದೂ ಅರ್ಜಿದಾರರು ವಾದಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News