×
Ad

ತಮಿಳುನಾಡು | ದೇವಾಲಯಲ್ಲಿ ಬಾಲಕಿಗೆ ಲೈಂಗಿಕ ದೌರ್ಜನ್ಯ : ಆರೋಪಿ ಅರ್ಚಕನ ವಿರುದ್ಧ ಪೊಕ್ಸೊ ಪ್ರಕರಣ ದಾಖಲು

Update: 2025-10-10 22:11 IST

ಸಾಂದರ್ಭಿಕ ಚಿತ್ರ | PC : freepik

ಕುಂಭಕೋಣಂ,ಅ.10: ಹದಿಮೂರು ವರ್ಷದ ಬಾಲಕಿಗೆ ದೇವಾಲಯದಲ್ಲಿ ಲೈಂಗಿಕ ದೌರ್ಜನ್ಯವನ್ನು ಎಸಗಿದ ಆರೋಪಕ್ಕೆ ಸಂಬಂಧಿಸಿ 75 ವರ್ಷ ವಯಸ್ಸಿನ ಅರ್ಚಕನೊಬ್ಬನನ್ನು ಬಂಧಿಸಲಾಗಿದೆ.

ತಿರುವಾಳನಚುಳಿಯಲ್ಲಿರುವ ದೇವಾಲಯದಲ್ಲಿ ಕಳೆದ ತಿಂಗಳು ಈ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ದೇವಾಲಯವು ಹಿಂದೂ ಧಾರ್ಮಿಕ ಹಾಗೂ ದತ್ತಿ ಇಲಾಖೆಯ ನಿಯಂತ್ರಣದಲ್ಲಿದೆಯೆಂದು ಅಧಿಕೃತ ಮೂಲಗಳು ತಿಳಿಸಿವೆ.

ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿಯನ್ನು ವಿಶ್ವನಾಥ ಅಯ್ಯರ್ ಎಂದು ಗುರುತಿಸಲಾಗಿದ್ದು ಆತ ಹಲವಾರು ವರ್ಷಗಳಿಂದ ದೇವಾಲಯದ ಮುಖ್ಯ ಅರ್ಚಕನಾಗಿ ಕೆಲಸ ಮಾಡುತ್ತಿದ್ದುದಾಗಿ ತಿಳಿದುಬಂದಿದೆ.

ಸಂತ್ರಸ್ತ ಬಾಲಕಿಯು ಸೆಪ್ಟೆಂಬರ್ 8ರಂದು, ದರ್ಶನಕ್ಕಾಗಿ ಕುಟುಂಬಿಕರೊಂದಿಗೆ ದೇವಾಲಯಕ್ಕೆ ಬಂದಿದ್ದಳು. ಆಕೆ ಏಕಾಂಗಿಯಾಗಿ ಕಾಣಿಕೆ ಹಣಹಾಕಲು ಹುಂಡಿಯಿರುವ ಸ್ಥಳಕ್ಕೆ ಬಂದಾಗ, ಅಲ್ಲಿದ ಆರ್ಚಕ ಆಕೆಯೊಂದಿಗೆ ಅನುಚಿತವಾಗಿ ನಡೆದುಕೊಂಡಿದ್ದನೆಂದು ಆಪಾದಿಸಲಾಗಿದೆ.

ಆರೋಪಿ ಅರ್ಚಕನ ವಿರುದ್ಧ ಪೋಕ್ಸೊ ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News